ADVERTISEMENT

ಪೊಲೀಸ್ ಆಯುಕ್ತರ ವರ್ಗ ಇಬ್ಬರು ಅಧಿಕಾರಿಗಳಿಗೆ ಬಡ್ತಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2011, 19:30 IST
Last Updated 2 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ. ಮೈಸೂರು ಪೊಲೀಸ್ ಆಯುಕ್ತರು ಸೇರಿದಂತೆ 12 ಮಂದಿಯನ್ನು ವರ್ಗಾವಣೆ ಮಾಡಲಾಗಿದೆ. ಇತರ ಇಬ್ಬರು ಕೆಎಎಸ್ ಅಧಿಕಾರಿಗಳನ್ನೂ ವರ್ಗಾವಣೆ ಮಾಡಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ ಮತ್ತು ಭದ್ರತೆ) ಪ್ರವೀಣ್ ಸೂದ್ ಅವರಿಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಸ್ಥಾನಕ್ಕೆ ಬಡ್ತಿ ನೀಡಿ, ಪೊಲೀಸ್ ಕಂಪ್ಯೂಟರ್ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಅವರಿಗೆ ಹೆಚ್ಚುವರಿಯಾಗಿ ಸಂಚಾರ ಮತ್ತು ರಸ್ತೆ ಸುರಕ್ಷತಾ ಆಯುಕ್ತರ ಹೊಣೆಯನ್ನೂ ವಹಿಸಲಾಗಿದೆ.

ಪದಂಕುಮಾರ್ ಗರ್ಗ್ ಅವರಿಗೂ ಎಡಿಜಿಪಿ ಹುದ್ದೆಗೆ ಬಡ್ತಿ ನೀಡಿ ಈಗಿರುವ ಮೈಸೂರು ಪೇಪರ್ ಮಿಲ್ಸ್‌ನ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಲ್ಲೇ ಮುಂದುವರಿಸಲಾಗಿದೆ. ಇವರಿಗೂ ಹೆಚ್ಚುವರಿಯಾಗಿ ಕೆಪಿಟಿಸಿಎಲ್ ಮತ್ತು ಎಲ್ಲ ವಿದ್ಯುತ್ ವಿತರಣಾ ಕಂಪೆನಿಗಳ (ಗುಪ್ತದಳ ಮತ್ತು ಜಾರಿ) ಎಡಿಜಿಪಿ ಹುದ್ದೆಯ ಹೊಣೆಯನ್ನು ನೀಡಲಾಗಿದೆ.

ಇತರ ವರ್ಗಾವಣೆ: ಡಾ.ಬಿ.ಇ.ಉಮಾಪತಿ- ಎಡಿಜಿಪಿ, ಸಂಶೋಧನೆ ಮತ್ತು ಪುನರ್‌ರಚನೆ, ಧಾರವಾಡ.
ಕೆ.ಎಸ್.ಎನ್.ಚಿಕ್ಕೆರೂರು- ಎಡಿಜಿಪಿ, ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯ, ಬೆಂಗಳೂರು.
ಕೆ.ಎ.ಹಫೀಜ್- ಎಡಿಜಿಪಿ, ರೈಲ್ವೆ, ಬೆಂಗಳೂರು.
ಡಾ.ಆರ್.ಪಿ.ಶರ್ಮಾ- ಐಜಿಪಿ, ಬೆಂಗಳೂರು ಮಹಾನಗರ ಕಾರ್ಯಪಡೆ, ಬೆಂಗಳೂರು.
ಸಂಜಯ್ ಸಹಾಯ್- ಐಜಿಪಿ, ಪೂರ್ವ ವಲಯ, ದಾವಣಗೆರೆ.
ಕಮಲ್ ಪಂತ್- ಐಜಿಪಿ (ಆಡಳಿತ), ಬೆಂಗಳೂರು.
ಸುನಿಲ್ ಅಗರ್‌ವಾಲ್- ಐಜಿಪಿ, ಪ್ರಧಾನ ಕಚೇರಿ-1, ಬೆಂಗಳೂರು.
ಪ್ರತಾಪ್ ರೆಡ್ಡಿ- ಪೊಲೀಸ್ ಆಯುಕ್ತರು, ಮೈಸೂರು ನಗರ.
ಡಾ.ಅಬ್ದುಲ್ ಸಲೀಂ. ಎಂ- ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ ಮತ್ತು ಭದ್ರತೆ), ಬೆಂಗಳೂರು ನಗರ.
ಬಿಜಯ್ ಕುಮಾರ್ ಸಿಂಗ್- ಡಿಐಜಿ ಮತ್ತು ನಿರ್ದೇಶಕರು (ಭದ್ರತೆ ಮತ್ತು ಗುಪ್ತದಳ), ಕೆಎಸ್‌ಆರ್‌ಟಿಸಿ, ಬೆಂಗಳೂರು.
ರಾಜ್ಯ ಪೊಲೀಸ್ ಸೇವೆಗೆ ಸೇರಿದ ಮೈಸೂರು ಡಿಸಿಪಿ (ಅಪರಾಧ, ಸಂಚಾರ) ರಾಜೇಂದ್ರ ಪ್ರಸಾದ್ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗ ಮಾಡಲಾಗಿದೆ.

ಕೆಎಎಸ್ ಅಧಿಕಾರಿಗಳು: ಇಬ್ಬರು ಕೆ.ಎ.ಎಸ್ ಅಧಿಕಾರಿಗಳನ್ನು ಸಚಿವರ ಆಪ್ತ ಕಾರ್ಯದರ್ಶಿಗಳನ್ನಾಗಿ ವರ್ಗಾವಣೆ ಮಾಡಲಾಗಿದೆ. ಎಸ್.ಬಿ.ಬೊಮ್ಮನಹಳ್ಳಿ- ಜಲಸಂಪನ್ಮೂಲ ಸಚಿವರು. ಕಾಶೀನಾಥ್ ಪವಾರ್- ಪಶುಸಂಗೋಪನೆ ಸಚಿವರ ಆಪ್ತ ಕಾರ್ಯದರ್ಶಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.