ADVERTISEMENT

‘ಪ್ರಜಾವಾಣಿ’ ಶೈಕ್ಷಣಿಕ ನೆರವು ನಿಧಿ: ವಿದ್ಯಾರ್ಥಿಗಳ ಅನಿಸಿಕೆ

​ಪ್ರಜಾವಾಣಿ ವಾರ್ತೆ
Published 25 ಮೇ 2018, 19:30 IST
Last Updated 25 ಮೇ 2018, 19:30 IST

ಬಡ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ

‘ಪ್ರಜಾವಾಣಿ’ ಶೈಕ್ಷಣಿಕ ನೆರವು ನಿಧಿಯಿಂದ ನೀಡಿದ ವಿದ್ಯಾರ್ಥಿ ವೇತನದಿಂದ ನನಗೆ ಓದು ಮುಂದುವರಿಸಲು ಅನುಕೂಲವಾಯಿತು. ಸದ್ಯ ಗೌರಿಬಿದನೂರು ನ್ಯಾಷನಲ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿರುವೆ. ಉನ್ನತ ವ್ಯಾಸಂಗದ ಕನಸು ಕಂಡವಳಿಗೆ ಆರ್ಥಿಕ ಸಮಸ್ಯೆ ಆತಂಕ ಮೂಡಿಸಿತ್ತು. ‘ಪ್ರಜಾವಾಣಿ’ ಸಹಾಯ ಅನುಕೂಲ ಕಲ್ಪಿಸಿತು.

-ಕೆ.ಎಲ್.ಭವ್ಯಾ, ಕಲ್ಲೂಡಿ, ಚಿಕ್ಕಬಳ್ಳಾಪುರ

ADVERTISEMENT

ನೆರವಿಗೆ ಧನ್ಯವಾದ

‘ಪ್ರಜಾವಾಣಿ’ ಶೈಕ್ಷಣಿಕ ನೆರವು ನಿಧಿಯಿಂದ ನಾನು ಕಾಲೇಜು ಶುಲ್ಕ ಕಟ್ಟಿದೆ. ಸಿಇಟಿಗೆ ಬೇಕಾದ ಪುಸ್ತಕಗಳನ್ನು ಕೊಂಡುಕೊಂಡೆ. ಇದರಿಂದ ಮುಂದಿನ ಓದಿಗೆ ಸಿದ್ಧತೆ ನಡೆಸಲು ಅನುಕೂಲವಾಗಿದೆ. ಈಗ ನಾನು ಶಿವಮೊಗ್ಗದ ಅರಬಿಂದೊ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದೇನೆ. ವಿದ್ಯಾಭ್ಯಾಸಕ್ಕೆ ನೆರವು ನೀಡಿದ ‘ಪ್ರಜಾವಾಣಿ’ಗೆ ನನ್ನ ವಂದನೆಗಳು.

ಅನಂತ್‌ ಜಿ. ಪ್ರಭು, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.