ADVERTISEMENT

ಪ್ರಜಾವಾಣಿ ಶೈಕ್ಷಣಿಕ ನೆರವು ನಿಧಿ

ವಿದ್ಯಾರ್ಥಿಗಳ ಅನಿಸಿಕೆ

​ಪ್ರಜಾವಾಣಿ ವಾರ್ತೆ
Published 24 ಮೇ 2018, 19:40 IST
Last Updated 24 ಮೇ 2018, 19:40 IST

ಸೇವೆ ಮರೆಯಲಾಗದು

‘ಪ್ರಜಾವಾಣಿ’ಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿತ್ತು. ತಂದೆ ಅಪಘಾತದಲ್ಲಿ ಗಾಯಗೊಂಡು ನಿತ್ರಾಣಗೊಂಡಿದ್ದು, ತಾಯಿ ನಮ್ಮನ್ನು ಸಲಹುತ್ತಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ 96 ರಷ್ಟು ಅಂಕ ಪಡೆದ ವಿಶ್ವಾಸದ ಮೇಲೆ ಅರ್ಜಿ ಹಾಕಿದೆ. ‘ಪ್ರಜಾವಾಣಿ’ಯವರು ತಕ್ಷಣ ಸ್ಪಂದಿಸಿ ಆರ್ಥಿಕ ನೆರವು ನೀಡಿದರು. ಬೀದರ್‌ನ ಮಾತಾ ಮಾಣಿಕೇಶ್ವರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಲ್ಕ ಪಾವತಿಸಿ ಪ್ರವೇಶ ಪಡೆದೆ. ಪಿಯುಸಿ ಮೊದಲ ವರ್ಷದಲ್ಲಿ ಶೇ 95ರಷ್ಟು ಅಂಕ ಪಡೆದಿದ್ದೇನೆ. ಉನ್ನತ ವ್ಯಾಸಂಗ ಮಾಡುವ ಮೂಲಕ ಕುಟುಂಬಕ್ಕೆ ಆಧಾರಸ್ತಂಭವಾಗುವ ಗುರಿ ಹೊಂದಿದ್ದೇನೆ. ಕಷ್ಟಕಾಲದಲ್ಲಿ ನೆರವಾದ ಪತ್ರಿಕೆಯ ಸಾಮಾಜಿಕ ಸೇವೆಯನ್ನು ಮರೆಯಲಾಗದು.

–ರೇವಣಸಿದ್ದಯ್ಯ ಸಂಗಯ್ಯ ಮಠಪತಿ, ಬೇಮಳಖೇಡ, ತಾಲ್ಲೂಕು ಚಿಟಗುಪ್ಪ, ಬೀದರ್‌ ಜಿಲ್ಲೆ

ADVERTISEMENT

ಗುರಿ ತಲುಪಲು ನೆರವು

ಗೋಣಿಕೊಪ್ಪಲು ವಿದ್ಯಾನಿಕೇತನ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದೇನೆ. ಎಸ್ಸೆಸ್ಸೆಲ್ಸಿ ಮುಗಿದ ಬಳಿಕ ‘ಪ್ರಜಾವಾಣಿ’ ನೀಡಿದ ಸ್ಕಾಲರ್‌ಷಿಪ್‌ ಹಣದಿಂದಲೇ ಕಾಲೇಜಿನ ಪ್ರವೇಶ ಶುಲ್ಕ ಪಾವತಿಸಿದೆ. ಸಂಕಷ್ಟದ ವೇಳೆ ನನಗೆ ಈ ಹಣ ದೊರೆಯಿತು. ನೆರವನ್ನು ನಾನೆಂದು ಮರೆಯುವುದಿಲ್ಲ. ಬಡತನದ ಕಾರಣಕ್ಕೆ ಪ್ರತಿಭಾನ್ವಿತರು ವಿದ್ಯಾಭ್ಯಾಸವನ್ನು ಮೊಟಕುಗೊಳಿಸುವ ಸ್ಥಿತಿ ಇಂದಿಗೂ ಇದೆ. ಆದರೆ, ‘ಪ್ರಜಾವಾಣಿ’ ಪತ್ರಿಕೆಯು ನೆರವು ನೀಡುವ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಕಾರ್ಯ.

–ಪಿ.ಕೆ. ನಿರತಾ, ನೀರಕಡಿ ಗ್ರಾಮ, ಕುಟ್ಟಾ ಅಂಚೆ, ಕೊಡಗು ಜಿಲ್ಲೆ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.