ADVERTISEMENT

ಪ್ರತಿನಿಧಿಗಳ ನೋಂದಣಿ ಸ್ಥಗಿತ

ಧಾರವಾಡ ಸಾಹಿತ್ಯ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 19:30 IST
Last Updated 4 ಜನವರಿ 2014, 19:30 IST

ಧಾರವಾಡ: ಇದೇ 17ರಿಂದ 19ರ­ವರೆಗೆ ನಗರದ ಕರ್ನಾಟಕ ವಿಶ್ವವಿದ್ಯಾ­ಲಯದ ಸುವರ್ಣ ಮಹೋತ್ಸವ ಭವನ­ದಲ್ಲಿ ನಡೆಯಲಿರುವ ಎರಡನೇ ಆವೃ­ತ್ತಿಯ ‘ಧಾರವಾಡ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗಾಗಲೇ 250ಕ್ಕೂ ಹೆಚ್ಚು ಮಂದಿ ಹೆಸರು ನೋಂದಾಸಿರುವುದರಿಂದ ನೋಂದಣಿ­ಯನ್ನು ಸ್ಥಗಿತಗೊ­ಳಿಸ­ಲಾಗಿದೆ ಎಂದು ‘ಧಾರವಾಡ ಸಾಹಿತ್ಯ ಸಂಭ್ರಮ’ ಟ್ರಸ್‌್ಟ ಅಧ್ಯಕ್ಷ ಡಾ.ಗಿರಡ್ಡಿ ಗೋವಿಂದರಾಜ ತಿಳಿಸಿದ್ದಾರೆ.

ಭವನದಲ್ಲಿ ಇರುವ ಆಸನದ ವ್ಯವಸ್ಥೆ ಕೇವಲ 500. ಇದರಲ್ಲಿ ಸಂಪನ್ಮೂಲ ವ್ಯಕ್ತಿಗಳಿಗೆ 90, ವಿಶೇಷ ಆಹ್ವಾನಿತರಿಗೆ 40, ಸ್ಥಳೀಯ ಅತಿಥಿಗಳಿಗೆ 50, ಮಾಧ್ಯಮದವರಿಗೆ 30, ಸಂಘಟಕರಿಗೆ 20, ಪ್ರಾಯೋಜಕರಿಗೆ 20 ಈ ರೀತಿ 250 ಆಸನಗಳನ್ನು ಕಾಯ್ದಿರಿಸಲಾಗಿದೆ. ಪ್ರತಿನಿಧಿಗಳಿಗೆ 200 ಪ್ರವೇಶಗಳನ್ನು ಕಾಯ್ದಿರಿಸಲಾಗಿತ್ತು. ಆದರೆ, ಈಗಾ­ಗಲೇ ಪ್ರತಿನಿಧಿಗಳಾಗಿ ನೋಂದಾ­ಯಿ­ಸಿ­ದವರ ಸಂಖ್ಯೆ 250 ಮೀರಿದೆ. ಸಭಾಭವನದಲ್ಲಿ ಹೆಚ್ಚಿನ ಸ್ಥಳಾವಕಾಶ­ವಿಲ್ಲ­ದ್ದರಿಂದ ಪ್ರತಿನಿಧಿಗಳ ನೋಂದಣಿ­ಯನ್ನು ಅನಿವಾರ್ಯವಾಗಿ ನಿಲ್ಲಿಸಲಾ­ಗಿದೆ ಎಂದು ಅವರು ಹೇಳಿದ್ದಾರೆ.

ಆಸಕ್ತರಿಗೆ ಸಭಾಭವನದ ಹೊರಗಿನ ಆವರಣದಲ್ಲಿ ಎಲ್.ಸಿ.ಡಿ. ಪರದೆ ಅಳವಡಿಸಿ ಕಲಾಪ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.