ಬೆಂಗಳೂರು : ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಮಂಡಿಸಿರುವ 2012-13ನೇ ಸಾಲಿನಲ್ಲಿ ಪ್ರಸ್ತಾಪಗೊಂಡಿರುವ ತೆರಿಗೆ ವಿವರಗಳು ಈ ಕೆಳಗಿನಂತಿವೆ.
ಅಗ್ಗ
1. ಕ್ರಯ, ಹಸ್ತಾಂತರಕ್ಕೆ ಸಂಬಂಧಿಸಿದಂತೆ ಮುದ್ರಾಂಕ ಶುಲ್ಕ ಶೇ. 6 ರಿಂದ ಶೇ. 5 ಕ್ಕೆ ಇಳಿಕೆ.
2. ಡೀಸೆಲ್ ಮೇಲಿನ ಸುಂಕ ಶೇ. 18 ರಿಂದ ಶೇ. 16.50ಕ್ಕೆ ಇಳಿಕೆ.
3. ಒಣಮೆಣಸಿನಕಾಯಿ ತೆರಿಗೆ ಶೇ 5 ರಿಂದ 2 ಕ್ಕೆ ಇಳಿಕೆ.
4. ಕಚ್ಚಾಹತ್ತಿ ಮೇಲೆ ಶೇ. 5 ರಿಂದ 2 ಕ್ಕೆ ಇಳಿಕೆ.
5.ಸರ್ಜಿಕಲ್ ಪಾದರಕ್ಷೆಗಳ ಮೇಲಿನ ತೆರಿಗೆ ಶೇ. 14 ರಿಂದ ಶೇ. 5 ಕ್ಕೆ ಇಳಿಕೆ.
6. ಬಂಗಾರ, ಬೆಲೆ ಬಾಳುವ ಲೋಹಗಳ ಮೇಲೆ ಶೇ. 2 ರಿಂದ 1 ಕ್ಕೆ ಇಳಿಕೆ.
7. ಹಣ್ಣಿನ ವೈನ್ ಮೇಲೆ ಶೇಕಡಾ 50ರಷ್ಟು ತೆರಿಗೆ ವಿನಾಯ್ತಿ.
8.ಚಪಾತಿ ಮತ್ತು ಪರೋಟ ಮೇಲಿನ ತೆರಿಗೆ ಇಳಿಕೆ.
9. ರೆಡಿಮೇಡ್ ಉಡುಪಿನ ಮೇಲಿನ ಸುಂಕ ಇಳಿಕೆ.
ದುಬಾರಿ :
1. ಪ್ಲಾಸ್ಟಿಕ್‌ನಿಂದ ನೇಯ್ದ ಬಟ್ಟೆಗಳ ಮೇಲೇ ಶೇ. 5 ರಷ್ಟು ವ್ಯಾಟ್.
2. ಬೀರ್ ಮೇಲೆ ಶೇ. 7.5 ರಷ್ಟು ತೆರಿಗೆ.
3. ಸಿಗರೇಟ್, ಬೀಡಿ ಮೇಲೆ ಶೇ. 15 ರಿಂದ 17 ಕ್ಕೆ ಏರಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.