ADVERTISEMENT

ಬಿಜೆಪಿ ಆಯ್ಕೆ ಸರಿಯಲ್ಲ: ಎಸ್.ಆರ್‌. ಹಿರೇಮಠ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 19:30 IST
Last Updated 13 ಮಾರ್ಚ್ 2018, 19:30 IST
ಬಿಜೆಪಿ ಆಯ್ಕೆ ಸರಿಯಲ್ಲ: ಎಸ್.ಆರ್‌. ಹಿರೇಮಠ
ಬಿಜೆಪಿ ಆಯ್ಕೆ ಸರಿಯಲ್ಲ: ಎಸ್.ಆರ್‌. ಹಿರೇಮಠ   

ಹುಬ್ಬಳ್ಳಿ: ‘ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ಭೂ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ರಾಜೀವ್ ಚಂದ್ರಶೇಖರ್ ಅವರನ್ನು ರಾಜ್ಯಸಭೆ ಅಭ್ಯರ್ಥಿಯಾಗಿ ಬಿಜೆಪಿ ಘೋಷಿಸಿರುವುದು ಸರಿಯಲ್ಲ’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ಹೇಳಿದರು.

‘2008ರಲ್ಲಿ ನಡೆದ ಈ ಹಗರಣದಲ್ಲಿ, ರಾಜೀವ್ ಭಾಗಿಯಾಗಿರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ. ಅವರಿಗೆ ಸೇರಿದ ಜುಪಿಟರ್‌ ಕ್ಯಾಪಿಟಲ್‌ ಕಂಪನಿಯು, ಪಿ.ವಿ.ಕೆ ಕೋರಮಂಗಲ ಡೆವಲಪ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ ಮೂಲಕ ಮಂತ್ರಿ ಹ್ಯಾಬಿಟಟ್ ಪ್ರೈ. ಲಿ. ಜತೆ ಒಪ್ಪಂದ ಮಾಡಿಕೊಂಡು ಸಾಲ ಪಡೆಯುವಲ್ಲಿ ಅವ್ಯವಹಾರ ಮಾಡಿರುವುದನ್ನು ದಾಖಲೆಗಳು ತೋರಿಸುತ್ತಿವೆ. ಆರೋಪ ನಿರಾಕರಿಸುವುದಾದರೆ, ದಾಖಲೆಗಳನ್ನು ಬಹಿರಂಗಪಡಿಸಲಿ’ ಎಂದು ಮಂಗಳವಾರ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT