
ಪ್ರಜಾವಾಣಿ ವಾರ್ತೆಬಾದಾಮಿ (ಬಾಗಲಕೋಟೆ): ತಾಲ್ಲೂಕಿನ ಮುತ್ತಲಗೇರಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಬಿಸಿಯೂಟ ಸೇವಿಸಿ 250ಕ್ಕೂ ಅಧಿಕ ಮಕ್ಕಳು ಅಸ್ವಸ್ಥಗೊಂಡಿದ್ದಾರೆ.
ಹಲ್ಲಿ ಬಿದ್ದ ಆಹಾರ ಸೇವಿಸಿದ ಮಕ್ಕಳು ವಾಂತಿ ಮಾಡಿಕೊಂಡಾಗ ಶಿಕ್ಷಕರು ಮತ್ತು ಗ್ರಾಮದ ಹಿರಿಯರು `ಆರೋಗ್ಯ ಕವಚ~ಕ್ಕೆ ದೂರವಾಣಿ ಕರೆ ಮಾಡಿ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು. ಬಿಸಿಯೂಟವನ್ನು ಖಾಸಗಿ ಸಂಸ್ಥೆ ಯೊಂದು ಪೂರೈಕೆ ಮಾಡಿದೆ ಎಂದು ತಿಳಿದಿದೆ. ಅಸ್ವಸ್ಥರಾಗಿದ್ದವರಲ್ಲಿ ಇನ್ನೂ 60 ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಗೆ ಮರಳಿದ್ದಾರೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಕವಿತಾ ಶಿವನಾಯ್ಕರ್ ತಿಳಿಸಿದ್ದಾರೆ.
ವೈದ್ಯರಾದ ಡಾ. ಜಯಂತ್, ಡಾ. ವೀಣಾ ಕೋರಿ ಹಾಗೂ ಸಿಬ್ಬಂದಿ ಮಕ್ಕಳಿಗೆ ತುರ್ತು ಚಿಕಿತ್ಸೆ ನೀಡಿದರು. ಆಸ್ಪತ್ರೆಯ ತುಂಬೆಲ್ಲ ಮಕ್ಕಳ ಪಾಲಕರೇ ತುಂಬಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.