ADVERTISEMENT

‘ಬೈನಾ ನಿರಾಶ್ರಿತರ ಪುನರ್ವಸತಿಗೆ ಬದ್ಧ’

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 19:30 IST
Last Updated 15 ಅಕ್ಟೋಬರ್ 2017, 19:30 IST
‘ಬೈನಾ ನಿರಾಶ್ರಿತರ ಪುನರ್ವಸತಿಗೆ ಬದ್ಧ’
‘ಬೈನಾ ನಿರಾಶ್ರಿತರ ಪುನರ್ವಸತಿಗೆ ಬದ್ಧ’   

ಯಲ್ಲಾಪುರ: ‘ಹೈಕೋರ್ಟ್ ಆದೇಶದ ಪ್ರಕಾರ ಬೈನಾ ಪ್ರದೇಶದಲ್ಲಿದ್ದ ಮನೆಗಳನ್ನು ತೆರವುಗೊಳಿಸಲಾಗಿದೆ. ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರ್ಕಾರ ಬದ್ಧವಾಗಿದೆ’ ಎಂದು ಗೋವಾ ಸಮಾಜ ಕಲ್ಯಾಣ ಸಚಿವ ಪಾಂಡುರಂಗ ಮಡಕೈಕರ್ ಹೇಳಿದರು.

ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾನುವಾರ ಪಟ್ಟಣಕ್ಕೆ ಬಂದಿದ್ದ ಅವರು, ‘ಹಲವು ವರ್ಷಗಳಿಂದ ಬಡ ಮೀನುಗಾರರು ಬೈನಾ ಕಡಲ ತೀರದಲ್ಲಿ ಮನೆ ನಿರ್ಮಿಸಿಕೊಂಡಿದ್ದರು. ಅತಿಕ್ರಮಣ ಮಾಡಿಕೊಂಡಿದ್ದರು ಎಂಬ ಕಾರಣಕ್ಕೆ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಅದರಲ್ಲಿ ಕನ್ನಡಿಗರೇ ಹೆಚ್ಚಿರಬಹುದು. ಪುನರ್ವಸತಿ ಕಲ್ಪಿಸಲು ಮಂಡಳಿಯೊಂದನ್ನು ರಚಿಸಲಾಗಿದೆ’ ಎಂದರು.

‘ಮಹದಾಯಿ ನದಿ ನೀರು ಎರಡೂ ರಾಜ್ಯಗಳಿಗೆ ಅಗತ್ಯವಾಗಿದೆ. ಮಾತುಕತೆ ಮೂಲಕ ಪರಿಹರಿಸಿಕೊಂಡಿದ್ದರೆ ಸುಪ್ರೀಂಕೋರ್ಟ್‌ವರೆಗೆ ಹೋಗುವುದು ತಪ್ಪುತ್ತಿತ್ತು. ಈಗಲೂ ಕಾಲ ಮಿಂಚಿಲ್ಲ. ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಗೊಳಿಸಿಕೊಳ್ಳಬಹುದು’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.