ಬೆಂಗಳೂರು: ಗೃಹ ಸಚಿವ ಆರ್.ಅಶೋಕ ವಿರುದ್ಧ ಮತ್ತೊಂದು ಭೂ ಹಗರಣ ಆರೋಪ ಕೇಳಿಬಂದಿದ್ದು, ಕೊಡಿಗೆಹಳ್ಳಿಯ ಕೆ.ಎನ್.ಜಗದೀಶ್ ಕುಮಾರ್ ಎಂಬುವವರು ಲೋಕಾಯುಕ್ತದಲ್ಲಿ ಭೂ ಕಬಳಿಕೆಯ ದೂರು ದಾಖಲಿಸಿದ್ದಾರೆ.
`ಕೊಡಿಗೆಹಳ್ಳಿಯಲ್ಲಿರುವ ಲೋಕಕಲ್ಯಾಣ ಪ್ರತಿಷ್ಠಾನಕ್ಕೆ ಸೇರಿದ 7 ಎಕರೆ 9 ಗುಂಟೆ ಜಾಗದ ಕೆಲವೊಂದು ದಾಖಲೆಗಳನ್ನು ತಿದ್ದಿ ಅಶೋಕ ಅವರು ತಮ್ಮ ಸಹೋದರಿಯ ಮಕ್ಕಳ ಹೆಸರಿಗೆ ಆ ಭೂಮಿಯನ್ನು ನೋಂದಣಿ ಮಾಡಿಸಿಕೊಂಡಿದ್ದರು. ಇದಾದ ನಂತರ ಬಹುತೇಕ ಭೂಮಿಯನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ~ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಟ್ರಸ್ಟ್‌ನ ಸದಸ್ಯರಲ್ಲಿ ಒಬ್ಬರಾದ ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಅವರು ಇದಕ್ಕೆ ಸಹಕರಿಸಿದ್ದು, ಭೂಮಿ ಪರಭಾರೆಯಾಗಲು ಅವರೂ ಕಾರಣರಾಗಿದ್ದಾರೆ. ಸರ್ವೆ ನಂ.162/1, 163/1, 163/2 ಮತ್ತು 164/7ಕ್ಕೆ ಸೇರಿದ ಈ ಜಾಗದ ಒಟ್ಟು ಮೌಲ್ಯ 175 ಕೋಟಿ ರೂಪಾಯಿ. ಅಲ್ಲಿ ಈಗ ಅಪಾರ್ಟ್‌ಮೆಂಟ್‌ಗಳನ್ನು ಕಟ್ಟಿಸಲಾಗುತ್ತಿದೆ ಎಂದು ಜಗದೀಶ್ ಕುಮಾರ್ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.