ADVERTISEMENT

ಭೈರಪ್ಪ ಹಳ್ಳಿ ಸುತ್ತಲಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2015, 19:30 IST
Last Updated 14 ಜೂನ್ 2015, 19:30 IST

ಚಿತ್ರದುರ್ಗ: ಲೇಖಕ ಎಸ್.ಎಲ್.ಭೈರಪ್ಪ ಅವರಿಗೆ ಹಸಿವಿನ ಅರಿವಿಲ್ಲ. ಅದಕ್ಕಾಗಿ ಅನ್ನಭಾಗ್ಯ ಯೋಜನೆ ಕುರಿತು ಟೀಕೆ ಮಾಡಿದ್ದಾರೆ. ಹೊಟ್ಟೆ ತುಂಬಾ ಊಟ ಮಾಡಿ ಬಡವರ ಬಗ್ಗೆ ಬರೆಯುವ ಅವರಿಗೆ ನಮ್ಮ ಸರ್ಕಾರದ ಯೋಜನೆಗಳನ್ನು ಟೀಕಿಸುವ ನೈತಿಕ ಹಕ್ಕಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಆಂಜನೇಯ ತಿರುಗೇಟು ನೀಡಿದರು.

ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿ, ಹಸಿವಿನ ನೋವು ತಿಳಿಯದ ಭೈರಪ್ಪ ಇಂತಹ ಹೇಳಿಕೆಗಳನ್ನು ನಿಲ್ಲಿಸಬೇಕು. ರಾಜ್ಯದ ಪ್ರತಿ ಹಳ್ಳಿಗಳಿಗೂ ಭೈರಪ್ಪ ಭೇಟಿ ನೀಡಿ ಮೊದಲು ಬಡವರು ಹಸಿವನ್ನು ಕಣ್ಣಾರೆ ನೋಡಿ ನಂತರ ಮಾತಾಡಲಿ ಎಂದು ಸವಾಲು ಎಸೆದರು. ಯಾರೇ ಟೀಕಿಸಿದರೂ ಅನ್ನಭಾಗ್ಯ ಯೋಜನೆಯನ್ನು ನಮ್ಮ ಸರ್ಕಾರ ನಿಲ್ಲಿಸುವುದಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.