ADVERTISEMENT

ಮಂಗಳೂರು: ಬ್ಲೂ ವೇಲ್‌ ಗೇಮ್‌ ಶಂಕೆ; ಮೂರನೇ ಮಹಡಿಯಿಂದ ಜಿಗಿದ ಬಾಲಕ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2017, 14:26 IST
Last Updated 7 ಅಕ್ಟೋಬರ್ 2017, 14:26 IST
ಮಂಗಳೂರು: ಬ್ಲೂ ವೇಲ್‌ ಗೇಮ್‌ ಶಂಕೆ; ಮೂರನೇ ಮಹಡಿಯಿಂದ ಜಿಗಿದ ಬಾಲಕ
ಮಂಗಳೂರು: ಬ್ಲೂ ವೇಲ್‌ ಗೇಮ್‌ ಶಂಕೆ; ಮೂರನೇ ಮಹಡಿಯಿಂದ ಜಿಗಿದ ಬಾಲಕ   

ಮಂಗಳೂರು: ನಗರದ ಹೊರವಲಯದ ಆಡುಮರೋಳಿ ಎಂಬಲ್ಲಿ ಒಂಬತ್ತನೇ ತರಗತಿ ವಿದ್ಯಾರ್ಥಿಯೊಬ್ಬ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬ್ಲೂ ವೇಲ್‌ ಗೇಮ್‌ ಶಂಕೆಯಿಂದ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಆಡುಮರೋಳಿ ನಿವಾಸಿ ಪದ್ಮನಾಭ ಮತ್ತು ವಿಶಾಲಾ ದಂಪತಿಯ ಮಗ ಪ್ರಥಮ್‌ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ. ಶನಿವಾರ ಮಧ್ಯಾಹ್ನ ಮನೆಯ ಪಕ್ಕದಲ್ಲಿರುವ ಕಟ್ಟಡವೊಂದರ ಮೂರನೇ ಮಹಡಿಯಿಂದ ಜಿಗಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಓದಿನಲ್ಲಿ ಹಿಂದುಳಿದಿರುವ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿರುವ ಪತ್ರವೊಂದು ಆತನ ಬಳಿ ಸಿಕ್ಕಿದೆ. ಆದರೆ, ಕೆಲವು ದಿನಗಳಿಂದ ಈ ವಿದ್ಯಾರ್ಥಿ ಪಕ್ಕದ ಕಟ್ಟಡದಲ್ಲಿ ತಾಲೀಮು ನಡೆಸುತ್ತಿರುವುದನ್ನು ನೋಡಿರುವುದಾಗಿ ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಬ್ಲೂ ವೇಲ್‌ ಗೇಮ್‌ ಆಡುತ್ತಾ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂಬ ಶಂಕೆಯಿಂದ ಕಂಕನಾಡಿ ನಗರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.