ADVERTISEMENT

ಮಂಡ್ಯ ಶಾಸಕ ಇಬ್ಬರು ಹೆಂಡಿರ ಗಂಡ!

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 19:59 IST
Last Updated 18 ಏಪ್ರಿಲ್ 2013, 19:59 IST

ಮಂಡ್ಯ: ಮಂಡ್ಯದ ಶಾಸಕ, ಜೆಡಿಎಸ್ ಅಭ್ಯರ್ಥಿ ಎಂ.ಶ್ರೀನಿವಾಸ್ ಅವರ ಒಟ್ಟು ಆಸ್ತಿ ಒಂದು ಕೋಟಿ ದಾಟಿದ್ದರೆ, ಅವರ ಪತ್ನಿಯರಾದ ಶಾಂತಾ ಅವರು 32 ಲಕ್ಷ ಹಾಗೂ ಎಸ್. ಪದ್ಮಾವತಿ ಅವರು 1.75 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಶ್ರೀನಿವಾಸ್ ಅವರು  91 ಲಕ್ಷ ರೂಪಾಯಿ ಸ್ಥಿರಾಸ್ತಿ, 3.80 ಲಕ್ಷ ರೂಪಾಯಿ ಚರಾಸ್ತಿ, 2.8 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನ, 15 ರೂ ಬೆಲೆ ಬಾಳುವ ವಾಹನಗಳನ್ನು ಹೊಂದಿದ್ದಾರೆ.

ಪತ್ನಿ ಶಾಂತಾ ಅವರು 20 ಲಕ್ಷ ರೂಪಾಯಿ ಸ್ಥಿರಾಸ್ತಿ, 6.50 ಲಕ್ಷ ರೂಪಾಯಿ ಚರಾಸ್ತಿ, 6.10 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ಹೊಂದಿದ್ದಾರೆ. ಇನ್ನೊಬ್ಬ ಪತ್ನಿ ಎಸ್. ಪದ್ಮಾವತಿ ಅವರು 1.57 ಕೋಟಿ ರೂಪಾಯಿ ಸ್ಥಿರಾಸ್ತಿ, 8.9 ಲಕ್ಷ ರೂಪಾಯಿ ಚರಾಸ್ತಿ, 8.9 ಲಕ್ಷ ರೂಪಾಯಿ ಚಿನ್ನಾಭರಣ ಮತ್ತಿತರ ವಸ್ತು ಹೊಂದಿದ್ದಾರೆ.

ಮೈಸೂರು ವರದಿ:  ಹೆಗ್ಗಡದೇವನ ಕೋಟೆ ವಿಧಾನ ಸಭಾ ಕ್ಷೇತ್ರದ ಜೆ.ಡಿ.ಎಸ್. ಅಭ್ಯರ್ಥಿ ಎಸ್.ಚಿಕ್ಕಮಾದ ಅವರಿಗೂ ಇಬ್ಬರು ಪತ್ನಿಯರು.ಪತ್ನಿ ಜಯಮ್ಮ ಅವರ ಹೆಸರಿನಲ್ಲಿ ರೂ 3.43 ಲಕ್ಷ ಹಾಗೂ ನಾಗಮ್ಮ ಹೆಸರಿನಲ್ಲಿ ರೂ 2.15 ಲಕ್ಷ ಹೂಡಿಕೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.