
ಪ್ರಜಾವಾಣಿ ವಾರ್ತೆದಾವಣಗೆರೆ: ಜಗಳೂರು ತಾಲ್ಲೂಕಿನಲ್ಲಿ ಗುರುವಾರ ರಾತ್ರಿ ಹೆಚ್ಚಿನ ಮಳೆ ಬಿದ್ದ ಪರಿಣಾಮ ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದೆ.
ತಾಲ್ಲೂಕಿನ ಬಿಳಿಚೋಡು, ಮುಕ್ಕಿದಹಳ್ಳಿ ಮತ್ತು ಬೆಂಚಿಕಟ್ಟೆ ಗ್ರಾಮಗಳಲ್ಲಿ 10ಕ್ಕೂ ಹೆಚ್ಚು ಬಾಳೆ ತೋಟಗಳು ನೆಲಕಚ್ಚಿವೆ. 20ಕ್ಕೂ ಅಧಿಕ ಮನೆಗಳು ಹಾಗೂ ವಿದ್ಯುತ್‌ಗಳು ಕುಸಿದು ಬಿದ್ದಿವೆ. ಅಂದಾಜು 45ಮೀ.ಮೀ ಮಳೆ ಆಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಎಚ್.ಪಿ. ನಾಗರಾಜ್ ನೇತೃತ್ವದ ತಂಡವು, ಸಂತ್ರಸ್ತರಿಗೆ ಸೂಕ್ತ ನೆರವು ನೀಡುವುದಾಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.