ವಿಜಾಪುರ: `ಇಲ್ಲಿಯ ಮಹಿಳಾ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿಯನ್ನಾಗಿ ಡಾ.ಎಸ್.ಎ. ಖಾಜಿ ಅವರನ್ನು ನೇಮಿಸಿ ಹೊರಡಿಸಿರುವ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ~ ಎಂದು ಮಹಿಳಾ ವಿವಿಯ ಕಲಾ ನಿಕಾಯದ ಡೀನ್ ಡಾ.ವಿಜಯಶ್ರೀ ಸಬರದ ತಿಳಿಸಿದ್ದಾರೆ.
ಮಹಿಳಾ ವಿವಿಯ ಕುಲ ಪತಿಯಾಗಿದ್ದ ಡಾ.ಗೀತಾ ಬಾಲಿ ಅವರ ಅವಧಿ ಜ.28ರಂದು ಕೊನೆಗೊಂಡಿತ್ತು. ಹಂಗಾಮಿ ಕುಲಪತಿಯಾಗಿ ಡಾ.ಎಸ್.ಎ. ಖಾಜಿ ಜ.30ರಂದು ನೇಮಕಗೊಂಡಿದ್ದರು.
`ಮಹಿಳಾ ವಿವಿಯ ಎಲ್ಲ ಡೀನ್‌ಗಳು ಜ.22ರಂದು ಸಭೆ ಸೇರಿ, ಜೇಷ್ಠತೆಯಿರುವ ಡೀನ್‌ರನ್ನು ಮಾತ್ರ ಹಂಗಾಮಿ ಕುಲಪತಿಯನ್ನಾಗಿ ನೇಮಿಸಲು ಶಿಫಾರಸು ಮಾಡಬೇಕು ಎಂದು ಕುಲಸಚಿವರಿಗೆ ಪತ್ರ ನೀಡಿದ್ದೆವು. ಆದರೆ, ಡಾ. ಗೀತಾ ಬಾಲಿ ಅವರು ನಮಗಿಂತಲೂ ಕಿರಿಯ ಡೀನ್ ಆಗಿರುವ ಡಾ.ಎಸ್.ಎ. ಖಾಜಿ ಅವರ ಹೆಸರನ್ನು ಶಿಫಾರಸು ಮಾಡಿದ್ದರು.
`ಈ ಅನ್ಯಾಯ ಸರಿಪಡಿಸಬೇಕೆಂದು ನಾವು ರಾಜ್ಯ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದೆವು ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.