ಮಂಗಳೂರು: ಕಾರನ್ನು ಅಡ್ಡಗಟ್ಟಿ ಅದರಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಮಾನಭಂಗಕ್ಕೆ ಯತ್ನಿಸಿದ್ದಲ್ಲದೇ, ಆಕೆಯ ಬಳಿ ಇದ್ದ ರೂ 3 ಲಕ್ಷ ರೂಪಾಯಿಯನ್ನು ದೋಚಿದ ಪ್ರಕರಣ ಬಜ್ಪೆ ಠಾಣಾ ವ್ಯಾಪ್ತಿಯ ಮರವೂರು ಬಳಿ ಬುಧವಾರ ರಾತ್ರಿ ನಡೆದಿದೆ.
ಪಾರಿಕಂಬಳ ಮೂಲದ ಡೀಬಾ ಅಲ್ಗಾನಿ (23) ಅವರು ತಾಯಿ ಹಾಗೂ ಸಂಬಂಧಿಕರೊಂದಿಗೆ ಬಾಡಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಬೈಕಿನಲ್ಲಿ ಬಂದ ಸುಮಾರು 12 ಮಂದಿ ದುಷ್ಕರ್ಮಿಗಳ ಗುಂಪು ಕಾರನ್ನು ಅಡ್ಡಗಟ್ಟಿತು. ಕಾರಿನ ಚಾಲಕನನ್ನು ಹಿಂಬದಿ ಸೀಟಿಗೆ ತಳ್ಳಿ, ಯುವತಿಯ ಸೊಂಟಕ್ಕೆ ಕೈ ಹಾಕಿ ಅನುಚಿತವಾಗಿ ವರ್ತಿಸಿತು.
`ನಿನಗೆ ಪ್ರಯಾಣಿಸಲು ಅನ್ಯಧರ್ಮೀಯರ ಕಾರೇ ಆಗಬೇಕಾ?~ ಎಂದು ಪ್ರಶ್ನಿಸಿ ಥಳಿಸಿತು. ಹಿಂದೂ ಧರ್ಮಕ್ಕೆ ಸೇರಿದ ಮನೆ ಮಾಲಿಕರ ಕಾರಿನಲ್ಲಿ ಪ್ರಯಾಣಿಸಿದ್ದನ್ನೇ ನೆಪ ಮಾಡಿ ಯುವಕರ ತಂಡ ಈ ರೀತಿ ವರ್ತಿಸಿತು ಎನ್ನಲಾಗಿದೆ.
ಬಳಿಕ ದುಷ್ಕರ್ಮಿಗಳು ಆಕೆಯ ಬಳಿ ಇದ್ದ ರೂ 3 ಲಕ್ಷ ರೂಪಾಯಿಯನ್ನು ಕಸಿದು ಬೈಕಿನಲ್ಲಿ ಪರಾರಿಯಾದರು. ಕೆಎಫ್‌ಡಿ ಸಂಘಟನೆಯವರೇ ಈ ಕೃತ್ಯ ನಡೆಸಿದ್ದಾರೆ ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.