ADVERTISEMENT

ಮುಖ್ಯಮಂತ್ರಿ ಪುತ್ರನ ಆಪ್ತನ ಹಣ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2016, 19:30 IST
Last Updated 15 ಡಿಸೆಂಬರ್ 2016, 19:30 IST

ಬೆಂಗಳೂರು: ಯಶವಂತಪುರದ ಫ್ಲ್ಯಾಟ್‌ವೊಂದರಲ್ಲಿ ಆದಾಯ ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡ ₹ 2.89 ಕೋಟಿ ಹಣ ರೋಹನ್‌ಗೌಡ ಎಂಬಾತನಿಗೆ ಸೇರಿದ್ದು ಎನ್ನಲಾಗಿದೆ.

ರೋಹನ್‌ಗೌಡ ಅವರು ಸಿ.ಎಂ ಪುತ್ರ  , ಇತ್ತೀಚೆಗೆ ನಿಧನರಾದ ರಾಕೇಶ್‌ ಅವರ ಆಪ್ತ ಎಂದು ಹೇಳಲಾಗಿದೆ. ಈ ಮಧ್ಯೆ , ಈ ಹಣವು ಸುಬ್ರಹ್ಮಣ್ಯನಗರ ವಾರ್ಡ್‌ನ ಕಾಂಗ್ರೆಸ್‌ ಸದಸ್ಯ ಎಚ್‌.ಮಂಜುನಾಥ್‌  ಅವರಿಗೆ ಸೇರಿದ್ದು ಎಂಬ ಮಾತುಗಳು ಕೇಳಿಬಂದಿವೆ.

ಆದರೆ, ಮಂಜುನಾಥ್‌ ಇದನ್ನು ನಿರಾಕರಿಸಿದ್ದಾರೆ. ‘ರೋಹನ್‌ಗೌಡ ಅವರ ಇನ್ನೊಂದು ಹೆಸರು ಮಂಜುನಾಥ್‌. ಈ ಕಾರಣಕ್ಕೆ ನಾನೇ ಆ ಮಂಜನಾಥ ಎಂದು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ’  ಎಂದು ಅವರು ಸ್ಪಷ್ಟನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.