ADVERTISEMENT

ಮೊಸಳೆ ದಾಳಿಗೆ ಕುರಿಗಾಹಿ ಬಲಿ

​ಪ್ರಜಾವಾಣಿ ವಾರ್ತೆ
Published 21 ಮೇ 2018, 19:30 IST
Last Updated 21 ಮೇ 2018, 19:30 IST

ಬಾಗಲಕೋಟೆ: ಕುರಿಗಳ ಮೈ ತೊಳೆಯಲೆಂದು, ಸೋಮವಾರ ಮಧ್ಯಾಹ್ನ ಘಟಪ್ರಭಾ ನದಿಯಲ್ಲಿ ಇಳಿದಿದ್ದ ಬೀಳಗಿ ತಾಲ್ಲೂಕು ಕೋವಳ್ಳಿಯ ಕಲ್ಲಪ್ಪ ನಾಗಪ್ಪ ಮಲ್ಲಕ್ಕನವರ (35) ಮೊಸಳೆಗೆ ಬಲಿಯಾಗಿದ್ದಾರೆ.

ತಮ್ಮ ನಾಲ್ವರು ಗೆಳೆಯರೊಂದಿಗೆ ನದಿಗೆ ತೆರಳಿದ್ದ ಕಲ್ಲಪ್ಪ, ನೀರು ಕುಡಿಯಲು ಕುರಿಹಿಂಡನ್ನು ಬಿಟ್ಟಿದ್ದರು. ಈ ವೇಳೆ ನದಿಯಲ್ಲಿ ನಿಂತು ಕುರಿಯೊಂದರ ಮೈ ತೊಳೆಯುತ್ತಿದ್ದಾಗ ಮೊಸಳೆ ದಾಳಿ ಮಾಡಿದೆ. ಜೊತೆಗಾರರು ರಕ್ಷಣೆಗೆ ಮುಂದಾದರಾದರೂ ಅವರ ಪ್ರಯತ್ನ ಫಲಿಸಲಿಲ್ಲ. ಕುರಿಗಾಹಿಯನ್ನು ನದಿಯ ಆಳ ಭಾಗಕ್ಕೆ, 200 ಮೀ. ನಷ್ಟು ದೂರ ಎಳೆದೊಯ್ದಿದೆ. ನದಿಯ ಆಸುಪಾಸಿನ ಹೊಲದಲ್ಲಿ ಇದ್ದವರೂ ರಕ್ಷಣೆಗೆ ಧಾವಿಸಿ ಕಲ್ಲು ಹೊಡೆದಿದ್ದಾರೆ. ಕೆಲ ಹೊತ್ತಿನ ನಂತರ ಮೊಸಳೆ ಅಲ್ಲಿಂದ ತೆರಳಿದೆ. ಅಷ್ಟೊತ್ತಿಗೆ ಕಲ್ಲಪ್ಪ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT