ADVERTISEMENT

ಮೊಸಳೆ ದಾಳಿ: ಕೃಷಿ ಕಾರ್ಮಿಕ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2014, 19:30 IST
Last Updated 19 ಜನವರಿ 2014, 19:30 IST

ಔರಾದ್‌: ಇಲ್ಲಿಗೆ ಸಮೀಪದ ಮಾಂಜ್ರಾ ನದಿಯಲ್ಲಿ ಕೃಷಿ ಕಾರ್ಮಿಕನನ್ನು ಮೊಸಳೆ ನೀರಿನೊಳಗೆ ಎಳೆದುಕೊಂಡು ಹೋದ ಘಟನೆ ನಡೆದಿದೆ.

ಖಾಜಾ ಮೈನುದ್ದೀನ್ (25) ಮೊಸಳೆ ದಾಳಿಗೆ ತುತ್ತಾದ ವ್ಯಕ್ತಿ. ಅವರು ಹೆಡಗಾಪುರ ಜಮೀನು­ದಾರರೊಬ್ಬರ ಬಳಿ ಕೆಲಸಕ್ಕಿದ್ದು ಶನಿವಾರ ಮಧ್ಯಾಹ್ನ ಎತ್ತುಗಳನ್ನು ತೊಳೆ­ಯಲು ಪಕ್ಕದ ಮಾಂಜ್ರಾ ನದಿಗೆ ಇಳಿದಿದ್ದರು. ಏಕಾಏಕಿ ಮೊಸಳೆ ಬಂದು ಅವರನ್ನು ನೀರಿಗೆ ಎಳೆದುಕೊಂಡು ಹೋಗಿದೆ ಎಂದು ಸ್ಥಳೀಯರು ಹೇಳಿದ್ದಾರೆ ಎಂದು ವಲಯ ಅರಣ್ಯ ಅಧಿಕಾರಿ ದೇವೇಂದ್ರಪ್ಪ ತಿಳಿಸಿದ್ದಾರೆ.

ಅವರ ಬಟ್ಟೆ ಮತ್ತು ಷೂ ನದಿಯ ದಂಡೆ ಮೇಲೆ ಇವೆ. ಅರಣ್ಯ ಇಲಾಖೆ ಸಿಬ್ಬಂದಿ  ಮತ್ತು ಅಗ್ನಿಶಾಮಕ ದಳ­ದವರು ಭಾನುವಾರ ಇಡೀ ದಿನ ಶೋಧ ಕಾರ್ಯಾಚರಣೆ ನಡೆಸಿದರೂ ಅವರು ಪತ್ತೆಯಾಗಿಲ್ಲ. ನಾಳೆಯೂ  ಶೋಧ ಕಾರ್ಯಾಚರಣೆ ಮುಂದು­ವರಿಯಲಿದೆ ಎಂದು ದೇವೇಂದ್ರಪ್ಪ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.