ADVERTISEMENT

ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ವಾರೆಂಟ್

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2012, 11:50 IST
Last Updated 5 ಮಾರ್ಚ್ 2012, 11:50 IST

ಬೆಂಗಳೂರು (ಪಿಟಿಐ): ಜಮೀನು ಡಿ ನೋಟಿಫೈ ಮಾಡಿದ ಎರಡು ಪ್ರಕರಣಗಳಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಲೋಕಾಯುಕ್ತ ನ್ಯಾಯಾಲಯ ಸೋಮವಾರ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.

ಲೋಕಾಯುಕ್ತ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು, ಯಡಿಯೂರಪ್ಪ ಹಾಗೂ ಮಕ್ಕಳಾದ ರಾಘವೇಂದ್ರ, ವಿಜೇಂದ್ರ, ಅಳಿಯ ಸೋಹನ್ ಕುಮಾರ್ ಮತ್ತು  ವಸತಿ ಖಾತೆ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರು ಮಾರ್ಚ್ 24ರಂದು ತಪ್ಪದೇ ನ್ಯಾಯಾಲಯದಲ್ಲಿ ಹಾಜರು ಇರಬೇಕೆಂದು ಆದೇಶಿಸಿದ್ದಾರೆ.

ಕಳೆದ ತಿಂಗಳು ಆರಂಭವಾದ ಪ್ರಕರಣಗಳ ವಿಚಾರಣೆಗೆ ಮೂರು ಬಾರಿಯೂ ಯಡಿಯೂರಪ್ಪ ಹಾಗೂ ಅವರ ಕುಟುಂಬದ ಸದಸ್ಯರು ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ಲೋಕಾಯುಕ್ತ ನ್ಯಾಯಾಧೀಶರು ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದಾರೆ.

ADVERTISEMENT

ಸಿರಾಜಿನ್ ಭಾಷಾ ದಾಖಲಿಸಿದ ಈ ಎರಡು ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ, ಗೈರು ಹಾಜರಾಗಿದ್ದ ಯಡಿಯೂರಪ್ಪ ಅವರು ನಂತರ  ಬಂಧನದ ಬೀತಿಯಲ್ಲಿ ಅಕ್ಟೋಬರ್ ತಿಂಗಳಲ್ಲಿ ವಿಚಾರಣೆ ನಡೆದಾಗ ತಾವೇ ಬಂದು ನ್ಯಾಯಾಲಯಕ್ಕೆ ಶರಣಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.