ADVERTISEMENT

ಯುನೆಸ್ಕೊ ಮಾನ್ಯತೆ ಈ ವರ್ಷ ಅನುಮಾನ

​ಪ್ರಜಾವಾಣಿ ವಾರ್ತೆ
Published 16 ಜೂನ್ 2011, 19:30 IST
Last Updated 16 ಜೂನ್ 2011, 19:30 IST

ಬೆಂಗಳೂರು:`ಯುನೆಸ್ಕೊ~ ವಿಶ್ವ ಪರಂಪರೆಯ ಪಟ್ಟಿಗೆ ಪಶ್ಚಿಮ ಘಟ್ಟದ 10 ಜೀವ ವೈವಿಧ್ಯ ತಾಣಗಳು ಈ ವರ್ಷ ಸೇರುವ ಸಾಧ್ಯತೆಗಳು ಇಲ್ಲ.ಯುನೆಸ್ಕೊದ ವಿಶ್ವ ಪರಂಪರೆ ವಿಭಾಗದ ವ್ಯವಸ್ಥಾಪಕ ಬಾಲ್ಸಮೊ ಅಲೆಸ್ಯಾಂಡ್ರೊ ಅವರು ಪ್ಯಾರಿಸ್‌ನಿಂದ ದೂರವಾಣಿ ಮೂಲಕ `ಪ್ರಜಾವಾಣಿ~ ಜತೆ ಮಾತನಾಡಿ, ವಿಶ್ವ ಪರಂಪರೆ ಸಮಿತಿಗೆ ಈ ಕುರಿತು ಋಣಾತ್ಮಕ ಶಿಫಾರಸು ಬಂದಿದೆ ಎಂದರು.

`ಅಂತರರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಐಯುಸಿಎನ್)ದಿಂದ ನಕಾರಾತ್ಮಕ ಶಿಫಾರಸು ಬಂದಿದೆ. ಈ ಶಿಫಾರಸುಗಳ ವಿವರಗಳನ್ನು ಬಹಿರಂಗಪಡಿಸಲಾಗದು. ಕಾರ್ಯವಿಧಾನದಲ್ಲಿನ ವಿಳಂಬ ಕೂಡ ಒಂದು ಕಾರಣ ಇರಬಹುದು~ ಎಂದ ಅವರು, `ಪಶ್ಚಿಮ ಘಟ್ಟಗಳನ್ನು ಪರಂಪರೆ ಪಟ್ಟಿಗೆ ಸೇರಿಸುವ ಪ್ರಸ್ತಾವವನ್ನು ಮುಂದಿನ ವರ್ಷ ಪರಿಗಣಿಸಬಹುದು~ ಎಂದರು.

`ಈ ವಿಷಯವನ್ನು ಮೇ ತಿಂಗಳಲ್ಲೇ ಭಾರತ ಸರ್ಕಾರಕ್ಕೆ ತಿಳಿಸಲಾಗಿದೆ. ಇಷ್ಟಾದರೂ ಪ್ಯಾರಿಸ್‌ನಲ್ಲಿ ನಡೆಯುವ ವಿಶ್ವ ಪರಂಪರೆ ಕುರಿತ ಸಮ್ಮೇಳನದಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ. ಇದರಲ್ಲಿ 21 ಸದಸ್ಯ ದೇಶಗಳು ಭಾಗವಹಿಸಲಿವೆ. ಅಲ್ಲಿ ಯಾವುದೇ ತೀರ್ಮಾನ ಆಗಬಹುದು~ ಎಂದು ವಿವರಿಸಿದ್ದಾರೆ.

`ಯುನೆಸ್ಕೊ ಪಟ್ಟಿಗೆ ವಿಶ್ವದ ವಿವಿಧ ದೇಶಗಳಿಂದ ಒಟ್ಟು 37 ಅರ್ಜಿಗಳು ಬಂದಿದ್ದು, ಅವುಗಳಲ್ಲಿ ಪಶ್ಚಿಮ ಘಟ್ಟ ಸೇರಿದಂತೆ ಅನೇಕ ತಾಣಗಳ ಬಗ್ಗೆ ನಕಾರಾತ್ಮಕ ಶಿಫಾರಸುಗಳು ಬಂದಿವೆ. ಇದೇ 25ರಂದು ಯುನೆಸ್ಕೊ ತನ್ನ ಅಂತಿಮ ಪಟ್ಟಿಯನ್ನು ಪ್ರಕಟಿಸಲಿದೆ.

ವಿಶ್ವಸಂಸ್ಥೆಯ ಮೂಲ ನಿವಾಸಿಗಳ ಕುರಿತ ಕಾರ್ಯಪಡೆಯ ಸದಸ್ಯರಾಗಿರುವ ಪರಿಸರ ತಜ್ಞ ಮಾಧವ ಗಾಡ್ಗೀಳ್ ಅವರು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯು ವಿಶ್ವ ಪರಂಪರೆ ಸ್ಥಾನಕ್ಕಾಗಿ ಅರ್ಜಿ ಸಲ್ಲಿಸಿರುವ ವಿಧಾನವನ್ನು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.