ADVERTISEMENT

ಯೋಗ್ಯತೆ ಇಲ್ಲದ ಪ್ರಿಯಾಂಕ್‌: ಮಾಲೀಕಯ್ಯ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 19:30 IST
Last Updated 6 ನವೆಂಬರ್ 2017, 19:30 IST
ಯೋಗ್ಯತೆ ಇಲ್ಲದ ಪ್ರಿಯಾಂಕ್‌: ಮಾಲೀಕಯ್ಯ ವಾಗ್ದಾಳಿ
ಯೋಗ್ಯತೆ ಇಲ್ಲದ ಪ್ರಿಯಾಂಕ್‌: ಮಾಲೀಕಯ್ಯ ವಾಗ್ದಾಳಿ   

ಕಲಬುರ್ಗಿ: ‘ಸಚಿವನಾದವನಿಗೆ ಯೋಗ್ಯತೆ ಇರಬೇಕು. ಯೋಗ್ಯತೆ ಇಲ್ಲದ ಸಚಿವನನ್ನು ಏಕವಚನದಲ್ಲೇ ಕರೆಯಬೇಕಾಗುತ್ತದೆ’ ಎಂದು ಅಫಜಲಪುರದ ಕಾಂಗ್ರೆಸ್‌ ಶಾಸಕ ಮಾಲೀಕಯ್ಯ ಗುತ್ತೇದಾರ ಅವರು ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಹರಿಹಾಯ್ದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಫಜಲಪುರದಲ್ಲಿ ಪ್ರಿಯಾಂಕ್‌ ಸಭೆ ಮಾಡುತ್ತಾನೆ. ಆದರೆ, ಸಭೆಗೆ ನನ್ನನ್ನೇ ಕರೆದಿರಲಿಲ್ಲ. ಈ ಬಾರಿ ಒಳ್ಳೆಯವರನ್ನು ಆಯ್ಕೆ ಮಾಡಿ ಎಂದು ಹೇಳುತ್ತಾನೆ. ನಾನೇನು ಕೆಟ್ಟವನಾ? ನನ್ನನ್ನು ಆಯ್ಕೆ ಮಾಡಿದ ಕ್ಷೇತ್ರದ ಜನ ಕೆಟ್ಟವರಾ’ ಎಂದು ಕಾರವಾಗಿ ಪ್ರಶ್ನಿಸಿದರು.

‘ಅಫಜಲಪುರದಲ್ಲಿ ನಡೆದ ಸಭೆ ಒಂದು ಸಮುದಾಯದ ಸಭೆ ಆಗಿರಲಿಲ್ಲ, ಜೆಡಿಎಸ್ ಸಭೆಯಂತಾಗಿತ್ತು. ಮಾಜಿ ಸಚಿವ ಬಂಡೆಪ್ಪ ಕಾಶಂಪೂರ, ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿ ಶಿವಕುಮಾರ ನಾಟೀಕರ್ ಅಲ್ಲಿದ್ದರು. ಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಪಾಲ್ಗೊಂಡು ಈ ಬಾರಿ ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡಿ ಎಂದರೆ ಏನು ಅರ್ಥ. ಈ ಮಾತು ನೋವುಂಟು ಮಾಡಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

***

‘ಕಾಂಗ್ರೆಸ್‌ ತೊರೆಯುವುದಿಲ್ಲ’

‘ಸಚಿವ ಸ್ಥಾನ ನೀಡದೆ ಇರುವುದಕ್ಕೆ ಅಸಮಾಧಾನ ಇರುವುದು ನಿಜ. ಆದರೆ, ಪಕ್ಷ ತೊರೆಯುವುದಿಲ್ಲ. ಹೈಕಮಾಂಡ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ನಂಬಿಕೆ ಇದೆ. ಸಿದ್ದರಾಮಯ್ಯ ಅವರು ಪಕ್ಷ ಬಿಟ್ಟು ಹೋಗು ಅನ್ನಲಿ. ಆಗ ಯೋಚನೆ ಮಾಡುತ್ತೀನಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.