ADVERTISEMENT

ರಂಗನತಿಟ್ಟು ಪಕ್ಷಿಧಾಮ: ಪ್ರವೇಶ ಶುಲ್ಕ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2017, 19:46 IST
Last Updated 1 ನವೆಂಬರ್ 2017, 19:46 IST
ಶ್ರೀರಂಗಪಟ್ಟಣ ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮದ ನೋಟ
ಶ್ರೀರಂಗಪಟ್ಟಣ ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮದ ನೋಟ   

ಶ್ರೀರಂಗಪಟ್ಟಣ: ತಾಲ್ಲೂಕಿನ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದ ಪ್ರವೇಶ, ದೋಣಿ ವಿಹಾರ ಮತ್ತು ಕ್ಯಾಮೆರಾ ಬಳಕೆ ಶುಲ್ಕ ನ. 1ರಿಂದ
ಹೆಚ್ಚಳವಾಗಿದೆ.

ಪ್ರವೇಶ ಶುಲ್ಕವನ್ನು ₹ 60ರಿಂದ₹ 70ಕ್ಕೆ, ವಿದೇಶಿಯರಿಗೆ ₹ 300ರಿಂದ ₹ 400ಕ್ಕೆ ಹೆಚ್ಚಳ ಮಾಡಲಾಗಿದೆ. ದೋಣಿ ವಿಹಾರ ಶುಲ್ಕ ₹ 60ರಿಂದ₹ 70ಕ್ಕೆ, ವಿದೇಶಿಯರಿಗೆ ₹ 300ರಿಂದ ₹ 400ಕ್ಕೆ ಹೆಚ್ಚಿಸಲಾಗಿದೆ. ವಿಶೇಷ ದೋಣಿ ವಿಹಾರಕ್ಕೆ ಇದ್ದ ಶುಲ್ಕವನ್ನು ₹ 1,000ದಿಂದ ₹ 1,500ಕ್ಕೆ ಹಾಗೂ ವಿದೇಶಿಯರಿಗೆ ₹ 2,000ದಿಂದ₹ 3,000ಕ್ಕೆ ಏರಿಸಲಾಗಿದೆ.

ವನ್ಯಜೀವಿ ವಿಭಾಗದ ಡಿಸಿಸಿಎಫ್‌ ಆದೇಶದ ಮೇರೆಗೆ ಶುಲ್ಕ ಹೆಚ್ಚಳ ಮಾಡಲಾಗಿದೆ ಎಂದು ಪಕ್ಷಿಧಾಮದ ಉಪ ವಲಯ ಅರಣ್ಯಾಧಿಕಾರಿ ಪುಟ್ಟಮಾದೇಗೌಡ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.