ADVERTISEMENT

ರಸ್ತೆ ದುರಸ್ತಿಗೆ ₹ 50 ಲಕ್ಷ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 19:30 IST
Last Updated 1 ಮಾರ್ಚ್ 2018, 19:30 IST
ರಸ್ತೆ ದುರಸ್ತಿಗೆ ₹ 50 ಲಕ್ಷ
ರಸ್ತೆ ದುರಸ್ತಿಗೆ ₹ 50 ಲಕ್ಷ   

ಉಳ್ಳಾಲ: ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಯುವಕರೊಬ್ಬರು ಹದಗೆಟ್ಟ ರಸ್ತೆಯ ಬಗ್ಗೆ ಪ್ರಧಾನಿ ಕಚೇರಿಗೆ ಬರೆದ ಪತ್ರಕ್ಕೆ ಸ್ಪಂದನೆ ದೊರೆತಿದೆ. ಕಾಮಗಾರಿಗೆ ನಗರೋತ್ಥಾನ 3ರಲ್ಲಿ ₹50 ಲಕ್ಷ ಅನುದಾನ ಮಂಜೂರಾಗಿದೆ.

ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೊಂಡಾಣ, ಮಾಡೂರು ಜಂಕ್ಷನ್ ಕೊಂಡಾಣ ದೈವಸ್ಥಾನ ಹಾಗೂ ಶ್ರೀ ಸಾಯಿ ಬಾಬಾ ಮಂದಿರಕ್ಕೆ ಸಂಪರ್ಕಿಸುವ ರಸ್ತೆಯು ಹದಗೆಟ್ಟಿತ್ತು. ಈ ಬಗ್ಗೆ ಸಮಾಜ ಸೇವಕ ಮಾಡೂರು ಕೊಂಡಾಣದ ಸುರೇಶ್ ಕೆ.ಪಿ ಅವರ ಪುತ್ರ ಸಾಗರ್.ಎಸ್. ಅವರು 2017ರ ಮಾರ್ಚ್‌ 17ರಂದು ಪ್ರಧಾನಿಗೆ ಪತ್ರ ಬರೆದಿದ್ದರು.

ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಣ ಬಳಕೆ ಮಾಡಿಕೊಂಡು ಕಾಮಗಾರಿ ಕೈಗೊಂಡ ಬಗ್ಗೆ ಪ್ರಧಾನಮಂತ್ರಿ ಕಚೇರಿಗೆ ನೀಡಿದ ವರದಿಯ ಪ್ರತಿಯನ್ನು ಸಾಗರ್‌ ಅವರಿಗೆ ರವಾನಿಸಿದ್ದು, ‘ನಿಮ್ಮ ಮನವಿಗೆ ಸ್ಪಂದಿಸಿ ಸ್ಥಳ ಪರಿಶೀಲನೆ ಮಾಡಲಾಗಿದೆ. ರಸ್ತೆ ಅಭಿವೃದ್ಧಿ ಕಾಮಗಾರಿಗೆ ನಗರೋತ್ಥಾನ 3ರ ಅಡಿ ₹50 ಲಕ್ಷ ಅನುದಾನ ಕಾಯ್ದಿರಿಸಲಾಗಿದೆ. ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿ ಆರಂಭದ ಹಂತದಲ್ಲಿದೆ’ ಎಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.