ADVERTISEMENT

ರೆಸಾರ್ಟ್ ರಾಜಕೀಯಕ್ಕೆ ನಾಯಕರ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST

 ಬಲವರ್ಧನೆಗೆ ಸಭೆ

ಯಡಿಯೂರಪ್ಪ ಅವರು ಪಕ್ಷದ ಆಸ್ತಿ. ನಮಗೆ ಅವರ ಸಹಕಾರ ಬೇಕು. ರಾಜ್ಯದ ಅಭಿವೃದ್ಧಿ ಮತ್ತು ಪಕ್ಷದ ಬಲವರ್ಧನೆ ಕುರಿತು ಚರ್ಚಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೆಲವು ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ದಿದ್ದಾರೆ.

`ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರೇ ಬಜೆಟ್ ಮಂಡಿಸುತ್ತಾರೆ. ಈ ಕುರಿತು ಯಾವುದೇ ಗೊಂದಲ ಬೇಡ. ಪಕ್ಷದ ರಾಜ್ಯ ಘಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ವರಿಷ್ಠರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ರಾಜಕೀಯ ಬೆಳವಣಿಗೆಗಳ ಕುರಿತು ಕೇಂದ್ರದ ನಾಯಕರು ನೀಡುವ ಸೂಚನೆ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು~.
-ಕೆ.ಎಸ್. ಈಶ್ವರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಜನರ ಕಿರಿಕಿರಿ ಸಹಿಸಲಾರದೆ ರೆಸಾರ್ಟ್‌ಗೆ
 

 ಕ್ಷೇತ್ರಕ್ಕೆ ಹೋದರೆ ಜನರು ಬರಗಾಲ, ನೀರಿಲ್ಲ, ವಿದ್ಯುತ್ ಇಲ್ಲ ಎಂದು ತಲೆ ತಿನ್ನುತ್ತಾರೆ. ಅವರ ಕಿರಿಕಿರಿಯನ್ನು ಸಹಿಸಲಾರದೆ ರೆಸಾರ್ಟ್‌ಗೆ ಬಂದಿದ್ದೇವೆ. ಊಟ ಮಾಡಲು, ಖಷಿಯಾಗಿರಲು ಇಲ್ಲಿ ತಂಗಿದ್ದೇವೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷದಲ್ಲಿನ ಈಗಿನ ಬೆಳವಣಿಗೆಗಳಿಂದ ಬೇಸರವಾಗಿದೆ. ಆದರೂ ನಾನು ಯಡಿಯೂರಪ್ಪ ಅವರೊಂದಿಗೆ ಇರುತ್ತೇನೆ. ನಾನು ಮಂತ್ರಿಯಾಗಲು ಯಡಿಯೂರಪ್ಪ ಅವರೇ ಕಾರಣ.
- ಸಚಿವ ರೇವು ನಾಯಕ ಬೆಳಮಗಿ

ಅತಿರೇಕದ ಪರಮಾವಧಿ...
 

ADVERTISEMENT

ರೆಸಾರ್ಟ್ ರಾಜಕಾರಣ ಕ್ಷೋಭೆ ತರುವುದಿಲ್ಲ. ಇದು ಒಳ್ಳೆಯ ಸಂಸ್ಕೃತಿಯಲ್ಲ. ಯಡಿಯೂರಪ್ಪ ಅವರ ವರ್ತನೆ ಅತಿರೇಕದ ಪರಮಾವಧಿ. ಪಕ್ಷ ನಾಶವಾದರೆ ಎಲ್ಲರೂ ನಾಶವಾಗುತ್ತಾರೆ ಎಂಬುದನ್ನು ಯಡಿಯೂರಪ್ಪ ಅರ್ಥ ಮಾಡಿಕೊಳ್ಳಬೇಕು.
- ಶಾಸಕ ಎಂ.ಶ್ರೀನಿವಾಸ್






ಬೀದಿಗೆ ಇಳಿದು ಹೋರಾಟ

 

ಒಕ್ಕಲಿಗರು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರ ಬೆನ್ನಿಗಿದ್ದಾರೆ. ಒಕ್ಕಲಿಗರನ್ನು ತುಳಿಯುವ ಪ್ರಯತ್ನ ಪಕ್ಷದಲ್ಲಿ ನಡೆಯುತ್ತಿದ್ದು, ಇದಕ್ಕೆ ಅವಕಾಶ ನೀಡುವುದಿಲ್ಲ. 27 ಜನ ಒಕ್ಕಲಿಗ ಶಾಸಕರು ಸದಾನಂದಗೌಡ ಮುಂದುವರಿಯಬೇಕು ಎಂದು ಬಯಸಿದ್ದಾರೆ. ಬಜೆಟ್ ಮಂಡಿಸುವುದನ್ನು ತಡೆಯಲು ಯಡಿಯೂರಪ್ಪ ಹೊರಟಿರುವುದು ಅವಿವೇಕದ ಪರಮಾವಧಿ. ಒಕ್ಕಲಿಗರ ಸಂಘದೊಂದಿಗೆ ಬೀದಿಗೆ ಇಳಿದು ಹೋರಾಟ ಮಾಡುತ್ತೇವೆ.
- ಎಚ್.ಎಸ್.ಶಂಕರಲಿಂಗೇಗೌಡ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.