ADVERTISEMENT

ರೈತನ ಜಮೀನಿಗಿಳಿದು, ಬೆಳೆ, ಪಡೆದ ಸಾಲ, ಆದಾಯದ ಮಾಹಿತಿ ಪಡೆದ ರಾಹುಲ್

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2018, 9:07 IST
Last Updated 26 ಫೆಬ್ರುವರಿ 2018, 9:07 IST
ರೈತರ ಜತೆ ಮಾತನಾಡುತ್ತಿರುವ ರಾಹುಲ್‌ ಗಾಂಧಿ.
ರೈತರ ಜತೆ ಮಾತನಾಡುತ್ತಿರುವ ರಾಹುಲ್‌ ಗಾಂಧಿ.   

ರಾಮದುರ್ಗ: ಮುಂಬೈ– ಕರ್ನಾಟಕದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಜನಾಶೀರ್ವಾದ ಯಾತ್ರೆಯ ಕೊನೆ ದಿನ ಸೋಮವಾರ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಇಲ್ಲಿನ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆದಿರುವ ಬೆಳೆ, ಪಡೆದಿರುವ ಸಾಲ, ಆದಾಯದ ಬಗ್ಗೆ ಮಾಹಿತಿ ಪಡೆದರು.

‘ಉದ್ಯಮಿಗಳು ಹಾಗೂ ಮಧ್ಯಮ ವರ್ಗದವರು ಬಿಜೆಪಿ ಪರವಾಗಿದ್ದಾರೆ. ಆದರೂ ನಾವು ಕರ್ನಾಟಕದಲ್ಲಿ ಗೆಲುವು ಸಾಧಿಸುತ್ತೇವೆ. ನಮಗೆ ರೈತರು, ಬಡವರು, ಕಾರ್ಮಿಕರ ಬೆಂಬಲ ಇದೆ’ ಎಂದು ರಾಹುಲ್‌ ತಿಳಿಸಿದರು.

‘ಗುಜರಾತ್‌ನಲ್ಲಿ 2002ರಿಂದ ಲೋಕಾಯುಕ್ತ, ಕೇಂದ್ರದಲ್ಲಿ ನಾಲ್ಕು ವರ್ಷವಾದರೂ ಲೋಕಪಾಲ್‌ ನೇಮಕ ಮಾಡದ ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ’ ಎಂದು ರಾಹುಲ್‌ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ADVERTISEMENT

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಇದ್ದರು.

*

ಬಳಿಕ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ರಾಹುಲ್ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.