ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯವು ಮೈಸೂರು ವಿಭಾಗದ ಬಳ್ಳಕೆರೆ, ಕಡೂರು ಹಾಗೂ ಬೀರೂರು ನಿಲ್ದಾಣಗಳ ನಡುವೆ ಜೋಡಿಮಾರ್ಗಕ್ಕೆ ಸಂಬಂಧಿಸಿ ಕಾಮಗಾರಿಗಳನ್ನು ಕೈಗೊಳ್ಳಲು ಅನುಮತಿ ನೀಡಿದೆ.
ಈ ಸಂಬಂಧ ಕಡೂರು ನಿಲ್ದಾಣದಲ್ಲಿ ಇದೇ ಎರಡರಿಂದ ಐದರವರೆಗೆ ಹಾಗೂ ಬೀರೂರು ನಿಲ್ದಾಣದಲ್ಲಿ ಇದೇ ಏಳರಿಂದ ಒಂಬತ್ತರವರೆಗೆ ಮತ್ತು ಕಡೂರು ನಿಲ್ದಾಣದಲ್ಲಿ ಇದೇ ಆರರಿಂದ ಏಳರವರೆಗೆ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗುತ್ತದೆ.
ಇದರಿಂದಾಗಿ ಬೆಂಗಳೂರು-ಹುಬ್ಬಳ್ಳಿ ಪ್ಯಾಸೆಂಜರ್ (56515), ಹುಬ್ಬಳ್ಳಿ-ಬೆಂಗಳೂರು ಪ್ಯಾಸೆಂಜರ್ (56516) ರೈಲುಗಳ ಸಂಚಾರವನ್ನು ಇದೇ ಎರಡು, ನಾಲ್ಕು ಹಾಗೂ ಏಳರಂದು ಸಂಪೂರ್ಣ ರದ್ದುಗೊಳಿಸಲಾಗಿದೆ. ಬೆಂಗಳೂರು-ಶಿವಮೊಗ್ಗ ಫಾಸ್ಟ್ ಪ್ಯಾಸೆಂಜರ್ (56917) ಹಾಗೂ ಶಿವಮೊಗ್ಗ-ಬೆಂಗಳೂರು ಫಾಸ್ಟ್ ಪ್ಯಾಸೆಂಜರ್ (56918) ರೈಲುಗಳನ್ನು ಇದೇ ಏಳರಿಂದ ಒಂಬತ್ತರವರೆಗೆ ಸಂಪೂರ್ಣ ರದ್ದುಗೊಳಿಸಲಾಗಿದೆ.
ಶಿವಮೊಗ್ಗ-ಮೈಸೂರು ಪ್ಯಾಸೆಂಜರ್ (56269) ಹಾಗೂ ಮೈಸೂರು-ಶಿವಮೊಗ್ಗ ಪ್ಯಾಸೆಂಜರ್ (56270) ರೈಲುಗಳನ್ನು ಬೀರೂರು ಹಾಗೂ ಅರಸೀಕೆರೆ ನಿಲ್ದಾಣಗಳ ನಡುವೆ ಇದೇ ಎರಡು, ನಾಲ್ಕು ಹಾಗೂ ಏಳರಂದು ಭಾಗಶಃ ರದ್ದುಗೊಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.