ADVERTISEMENT

ಲಾರಿ- ಬಸ್ ಡಿಕ್ಕಿ: ಮೂವರ ಸಾವು

​ಪ್ರಜಾವಾಣಿ ವಾರ್ತೆ
Published 5 ಜೂನ್ 2013, 19:59 IST
Last Updated 5 ಜೂನ್ 2013, 19:59 IST
ಹಿರೀಸಾವೆ ಸಮೀಪದ ಕಲ್ಲಹಳ್ಳಿ ಗೇಟ್ ಬಳಿ ಮಂಗಳವಾರ ರಾತ್ರಿ ನಡೆದ ಅಪಘಾತದಲ್ಲಿ ಜಖಂಗೊಂಡ ಬಸ್ ಮತ್ತು ಲಾರಿ
ಹಿರೀಸಾವೆ ಸಮೀಪದ ಕಲ್ಲಹಳ್ಳಿ ಗೇಟ್ ಬಳಿ ಮಂಗಳವಾರ ರಾತ್ರಿ ನಡೆದ ಅಪಘಾತದಲ್ಲಿ ಜಖಂಗೊಂಡ ಬಸ್ ಮತ್ತು ಲಾರಿ   

ಹಿರೀಸಾವೆ (ಹಾಸನ ಜಿಲ್ಲೆ): ಮರಳು ಸಾಗಣೆ ಲಾರಿ ಮತ್ತು ಬೆಂಗಳೂರಿನಿಂದ ಮುರ್ಡೇಶ್ವರಕ್ಕೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ `ಐರಾವತ' ಬಸ್ ಮುಖಾಮುಖಿ ಡಿಕ್ಕಿಯಾಗಿ ಮೂವರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಹಿರೀಸಾವೆ ಹೋಬಳಿಯ ಕಲ್ಲಹಳ್ಳಿ ಗೇಟ್ ಬಳಿ ಮಂಗಳವಾರ ರಾತ್ರಿ ಸಂಭವಿಸಿದೆ.

ಬಸ್ ಚಾಲಕ, ಪುತ್ತೂರಿನ ರಾಜೇಂದ್ರ ಶೆಟ್ಟಿ (45), ಪ್ರಯಾಣಿಕ, ಬೆಂಗಳೂರಿನ ಹಿಮಾಲಯನ್ ಡ್ರಗ್ಸ್ ಕಂಪೆನಿಯ ನೌಕರ, ಕುಂದಾಪುರ ಮೂಲದ ಅರವಿಂದ ಪಡಿಯಾರ್ (44), ಲಾರಿ ಚಾಲಕ, ಕನಕಪುರ ಜಿಲ್ಲೆಯ ಗೊಡಸಂದ್ರದ ಮಂಜುನಾಥ (28) ಮೃತಪಟ್ಟವರು.

ಬಸ್ ನಿರ್ವಾಹಕ ಶಿವಶಂಕರ್, ಪ್ರಯಾಣಿಕರಾದ ರೇಡಪ್ಪ, ಅವರ ಪತ್ನಿ ಕಾಂತಾ, ದಯಾನಂದ್ ಮತ್ತಿತರರಿಗೆ ತೀವ್ರವಾದ ಗಾಯಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT