ADVERTISEMENT

ವರದಕ್ಷಿಣೆ ಪದ್ಧತಿ ತೊಡೆದುಹಾಕಲು ಕರೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:30 IST
Last Updated 18 ಏಪ್ರಿಲ್ 2012, 19:30 IST

ಮಡಿಕೇರಿ: ಮಹಿಳೆಯರು ಮನಸ್ಸು ಮಾಡಿದಾಗ ಮಾತ್ರ ಸಮಾಜದಲ್ಲಿರುವ ವರದಕ್ಷಿಣೆಯಂತಹ ಅನಿಷ್ಟ ಪದ್ಧತಿಗಳನ್ನು ತೊಡೆದುಹಾಕಲು ಸಾಧ್ಯ ಎಂದು   ನ್ಯಾಷನಲ್ ವಿಮೆನ್ ಫ್ರಂಟ್‌ನ ರಾಜ್ಯ ಕಾರ್ಯದರ್ಶಿ ಫಾತಿಮ ನಸೀಮಾ ಹೇಳಿದರು.

ನಗರದ ಕಮ್ಯುನಿಟಿ ಹಾಲ್‌ನಲ್ಲಿ ಬುಧವಾರ ನ್ಯಾಷನಲ್ ವಿಮೆನ್ ಫ್ರಂಟ್ ಹಮ್ಮಿಕೊಂಡ ವರದಕ್ಷಿಣೆ ವಿರೋಧಿ ಜನಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.

ಇಸ್ಲಾಂ ಧರ್ಮದಲ್ಲಿ ವರದಕ್ಷಿಣೆ ಎನ್ನುವುದು ಇಲ್ಲ. ಇದು ಹೊರಗಡೆಯಿಂದ ಬಂದಿರುವಂತಹ ಅನಿಷ್ಟ ಪದ್ಧತಿಯಾಗಿದೆ.

ಇಂತಹ ಅನಿಷ್ಟ ಪದ್ಧತಿಯಿಂದಾಗಿ ಬಡ ಕುಟುಂಬಗಳ ಯುವತಿಯರಿಗೆ ಮದುವೆ ಹೊರೆಯಾಗಿ ಪರಿಣಮಿಸಿದೆ. ಇದರ ವಿರುದ್ಧ ಪುರುಷರು- ಮಹಿಳೆಯರು ಎಲ್ಲರೂ ಸೇರಿ ಒಗ್ಗಟ್ಟಾಗಿ ಹೋರಾಡಬೇಕಾಗಿದೆ ಎಂದು ಅವರು ಕರೆ ನೀಡಿದರು.

ಮೂಲತಃ ಇಸ್ಲಾಂ ಧರ್ಮದಲ್ಲಿ ಹೆಣ್ಣಿಗೆ ಅತ್ಯಂತ ಎತ್ತರದ ಸ್ಥಾನ ನೀಡಲಾಗಿದೆ. ಆದರೆ, ಇಂದು ಹೆಣ್ಣನ್ನು ಸಮಾಜವು ಮಾರಾಟದ ವಸ್ತುವನ್ನಾಗಿ ನೋಡುತ್ತಿದೆ.

 ಸಿಮೆಂಟ್ ಕಂಪೆನಿಯೊಂದರ ಜಾಹೀರಾತಿನಲ್ಲಿಯೂ ಯುವತಿಯರನ್ನು ತೋರಿಸಲಾಗುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ಸಭೆಯಲ್ಲಿ ಶಿಕ್ಷಕಿ ನಿಶಾತ್ ಸುಲ್ತಾನ್, ಫ್ರಂಟ್‌ನ ಕೊಡಗು ಜಿಲ್ಲಾ ಕಾರ್ಯದರ್ಶಿ ಜಾಕಿಯಾ, ಆಶಿಕಾ, ಮೈಮುನಾ, ಸೇರಿದಂತೆ ಇತರರು ಭಾಗವಹಿಸಿದ್ದರು. ಜನಜಾಗೃತಿ ಅಭಿಯಾನದಲ್ಲಿ ಹಲವು ಮಹಿಳೆಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.