ADVERTISEMENT

ವರುಣಾದಿಂದ ವಿಜಯೇಂದ್ರಗೆ ಟಿಕೆಟ್ ನೀಡದ ನಿರ್ಧಾರ ನನ್ನದೆ: ಅಮಿತ್‌ ಶಾ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 18:18 IST
Last Updated 29 ಏಪ್ರಿಲ್ 2018, 18:18 IST
ವರುಣಾದಿಂದ ವಿಜಯೇಂದ್ರಗೆ ಟಿಕೆಟ್ ನೀಡದ ನಿರ್ಧಾರ ನನ್ನದೆ: ಅಮಿತ್‌ ಶಾ
ವರುಣಾದಿಂದ ವಿಜಯೇಂದ್ರಗೆ ಟಿಕೆಟ್ ನೀಡದ ನಿರ್ಧಾರ ನನ್ನದೆ: ಅಮಿತ್‌ ಶಾ   

ಬೆಂಗಳೂರು: ‘ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಅವರಿಗೆ ಟಿಕೆಟ್ ನೀಡದೇ ಇರುವ ನಿರ್ಧಾರ ನನ್ನದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು.

ಭಾನುವಾರ ರಾತ್ರಿ ಮಾಧ್ಯಮ ಪ್ರತಿನಿಧಿಗಳ ಜತೆ ಅನೌಪಚಾರಿಕವಾಗಿ ಮಾತನಾಡಿ ಈ ವಿಷಯ ತಿಳಿಸಿದರು.

ಒಬ್ಬ ಕಾರ್ಯಕರ್ತನಿಗೆ ಟಿಕೆಟ್ ನೀಡಿದ್ದೇವೆ. ಅಲ್ಲಿ ಪ್ರಚಾರಕ್ಕೆ ನಾನೇ ಹೋಗುತ್ತೇನೆ ಎಂದೂ ಅವರು ಹೇಳಿದರು.

ADVERTISEMENT

ಮುಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನಾವು ಮಾಡಿರುವ ವಾಗ್ದಾನಕ್ಕೆ ಬದ್ಧರಾಗಿರುತ್ತೇವೆ. ರಾಜ್ಯದಲ್ಲಿ ಬಿಜೆಪಿ ಬಹುಮತದೊಂದಿಗೆ ಸರ್ಕಾರ ರಚಿಸುತ್ತದೆ ಎಂದೂ ಶಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.