ADVERTISEMENT

ವಾರದಲ್ಲಿ ವಾಪಸ್‌: ಅಂಬರೀಷ್‌ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 19:30 IST
Last Updated 18 ಮಾರ್ಚ್ 2014, 19:30 IST

ಬೆಂಗಳೂರು: ಸಿಂಗಪುರದ ಮೌಂಟ್‌ ಎಲಿಜಬೆತ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ, ವಸತಿ ಸಚಿವ ಅಂಬರೀಷ್‌ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಖುದ್ದು ಅವರೇ ಮಂಗಳವಾರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಅವರ ಪ್ರತಿಕ್ರಿಯೆ ಇರುವ ವಿಡಿಯೊ ಪ್ರತಿ ಬಿಡುಗಡೆಯಾಗಿದ್ದು, ಅದರಲ್ಲಿ  ಅವರ ಮಾತು ಇಂತಿದೆ.
ನಾನು ನಿಮ್ಮ ಅಂಬರೀಷ್‌ ಎಂದು ಮಾತು ಆರಂಭಿಸಿದ ಅವರು, ‘ಆರೋಗ್ಯ­ದಲ್ಲಿ ತುಸು ಏರುಪೇರಾ­ಗಿತ್ತು. ಅಭಿ­ಮಾ­ನಿ­­ಗಳು ತೋರಿ­ಸಿದ ಪ್ರೀತಿ­ಯಿಂದ ಸಂಪೂ­ರ್ಣ­ವಾಗಿ ಗುಣ­ಮುಖ­­ನಾಗಿ­ದ್ದೇನೆ’ ಎಂದು ತಿಳಿ­ಸಿ­ದ್ದಾರೆ.

‘ನಾನೊಬ್ಬ ನಟ, ಸಚಿವ ಅಂತ ಸರ್ಕಾರ ಸಹಾಯ ಮಾಡಿಲ್ಲ. ನನಗೆ  ಪ್ರೀತಿಯಿಂದ ನೆರವು ನೀಡಿದೆ. ಇಂತಹ ಸಂದರ್ಭಗಳಲ್ಲಿ ಸ್ಪಂದಿಸುವುದು ಮುಖ್ಯ. ಈ ವಿಚಾರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಋಣಿಯಾಗಿದ್ದೇನೆ’ ಎಂದು ಭಾವುಕರಾದರು.

‘ಅಭಿಮಾನಿಗಳ ಪೂಜೆ, ಪುನಸ್ಕಾರ ಫಲಿಸಿದೆ. ಆತಂಕ ಬೇಡ. ವಿಕ್ರಂ ಆಸ್ಪತ್ರೆಯ ವೈದ್ಯರು ಹಾಗೂ ಸಿಂಗಪುರ ಆಸ್ಪತ್ರೆ ವೈದ್ಯರು ಉತ್ತಮ ಚಿಕಿತ್ಸೆ ನೀಡಿದ್ದಾರೆ. ಇನ್ನು ವಾರ­ದ­ಲ್ಲಿ ತಾಯ್ನಾಡಿಗೆ ಮರಳಲಿ­ದ್ದೇನೆ’ ಎಂದು ತಿಳಿಸಿದರು.

ತೀವ್ರ ಉಸಿರಾಟದ ಸೋಂಕಿ­ನಿಂದ ಬಳಲುತ್ತಿದ್ದ ಅವರು ಫೆ. 21 ರಂದು ವಿಕ್ರಂ ಆಸ್ಪತ್ರೆಗೆ ದಾಖ­ಲಾಗಿ­ದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಾರ್ಚ್‌ 1 ರಂದು ವಿಶೇಷ ಏರ್‌ ಆಂಬುಲೆನ್ಸ್‌ನಲ್ಲಿ ಅವರನ್ನು ಸಿಂಗ­ಪು­ರಕ್ಕೆ ಕರೆದುಕೊಂಡು ಹೋಗ­ಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.