ADVERTISEMENT

ವಿಗ್ರಹ ಕಳವು: ಮಾಹಿತಿ ಕೇಳಿದ ರಾಷ್ಟ್ರಪತಿ ಭವನ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 11 ಜುಲೈ 2013, 19:59 IST
Last Updated 11 ಜುಲೈ 2013, 19:59 IST

ಮೂಡುಬಿದಿರೆ: ಇಲ್ಲಿನ ಸಿದ್ಧಾಂತ ಮಂದಿರದಲ್ಲಿ ನಡೆದ ಪುರಾತನ ಹಾಗೂ ಬೆಲೆಬಾಳುವ ವಿಗ್ರಹಗಳ ಕಳ್ಳತನಕ್ಕೆ ಸಂಬಂಧಿಸಿ ರಾಷ್ಟ್ರಪತಿ ಭವನದ ಅಧಿಕಾರಿಗಳು ಗುರುವಾರ ಜೈನಮಠದ ಭಟ್ಟಾರಕ ಶ್ರಿಗಳಿಂದ ಮಾಹಿತಿ ಕೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಸ್ವಾಮೀಜಿಯವರ ನಿರ್ದೇಶನದಂತೆ ತಮಿಳುನಾಡುಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಸುಧೀರ್ ಜೈನ್ ಅವರ ನೇತೃತ್ವದಲ್ಲಿ ಮುಂದಿನ ವಾರ ಮೂಡುಬಿದಿರೆ ಜೈನಮಠದ ನಿಯೋಗ ರಾಷ್ಟ್ರಪತಿ ಅವರನ್ನು ಭೇಟಿಯಾಗಿ ಘಟನೆಯ ಕುರಿತು ಅಗತ್ಯ ಮಾಹಿತಿ ನೀಡಿ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಲಿದೆ ಎಂದು ಜೈನಮಠದ ಭಟ್ಟಾರಕ ಸ್ವಾಮಿ ತಿಳಿಸಿದ್ದಾರೆ.

ಸಂಸತ್ ಸದಸ್ಯ ನಳಿನ್ ಕುಮಾರ್ ಕಟೀಲು ಅವರು ಶುಕ್ರವಾರ ಜೈನಮಠದಲ್ಲಿ ಸ್ವಾಮೀಜಿ ಅವರನ್ನು ಭೇಟಿಯಾಗಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.