ADVERTISEMENT

ವೇದಿಕೆಯಲ್ಲಿ ಕಾಣಿಸಿದ ಬೆಂಕಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 19:30 IST
Last Updated 7 ಜನವರಿ 2014, 19:30 IST

ಭಾರತೀಸುತ ವೇದಿಕೆ (ಮಡಿಕೇರಿ): ಇಲ್ಲಿ ಮಂಗಳವಾರ ಸಂಜೆ ‘ಕಾವ್ಯ ಗಾಯನ’ ಕಾರ್ಯಕ್ರಮ ನಡೆಯು­ತ್ತಿದ್ದ ಸಂದರ್ಭದಲ್ಲಿ ವೇದಿಕೆಯ ಒಂದು ಭಾಗದ

ಶಾಮಿಯಾನದಲ್ಲಿ ಶಾರ್ಟ್‌ ಸರ್ಕಿಟ್‌ನಿಂದಾಗಿ ಬೆಂಕಿ ತಗುಲಿತು.

ಬೆಂಕಿಯನ್ನು ಕೇವಲ 20 ನಿಮಿಷ­ಗಳಲ್ಲಿ ನಿಯಂತ್ರಿಸ­ಲಾಯಿತು. ಯಾವುದೇ ಅನಾಹುತ ಸಂಭವಿಸಲಿಲ್ಲ. ಸಾಹಿತಿ ಕೆ.ಪಿ. ಬಾಲಸುಬ್ರಹ್ಮಣ್ಯಂ ಅವರು ಕಾರ್ಯಕ್ರಮದ ಆಶಯ ನುಡಿ ಮಾತುಗಳನ್ನಾಡುತ್ತಿದ್ದ ಸಂದ­ರ್ಭ­ದಲ್ಲಿ ಪತ್ರಕರ್ತರ ಗ್ಯಾಲರಿಯ ಮೇಲಿನ ಶಾಮಿಯಾನದಲ್ಲಿ ಬೆಂಕಿ ಕಾಣಿಸಿಕೊಂಡಿತು.
ಕೆಲವು ಜನ ಸಭಿಕರು ನೀರು ಚಿಮ್ಮಿಸಿ, ಬೆಂಕಿ ನಂದಿಸಲು ಪ್ರಯತ್ನಿಸಿದರು. ಅಗ್ನಿ ಶಾಮಕ ದಳದ ಸಿಬ್ಬಂದಿಗಳೂ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಿದರು.

‘ಬೆಂಕಿ ಆರಿಸುವ ಕೆಲಸವನ್ನು ಅಗ್ನಿಶಾಮಕ ದಳದವರು ಮಾಡುತ್ತಾರೆ’ ಎಂದು ಹೇಳಿದ ಬಾಲಸುಬ್ರಹ್ಮಣ್ಯಂ ಅವರು, ತಮ್ಮ ಭಾಷಣವನ್ನು ಮುಂದುವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.