
ಪ್ರಜಾವಾಣಿ ವಾರ್ತೆವಿಟ್ಲ (ದಕ್ಷಿಣ ಕನ್ನಡ): ಭೂಮಿ ಅಕಾಡೆಮಿ ಆಫ್ ಆರ್ಟ್ ಆಂಡ್ ಕಲ್ಚರ್ ಹಾಗೂ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕಲಾವಿದರ ಬಳಗ ಏರ್ಪಡಿಸಿದ ರಾಜ್ಯಮಟ್ಟದ ವ್ಯಂಗ್ಯ ಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿದ ವ್ಯಂಗ್ಯಚಿತ್ರ ಕಲಾವಿದ ಉದಯ್ ವಿಟ್ಲ ಅವರ ವ್ಯಂಗ್ಯಚಿತ್ರ ಪ್ರಥಮ ಬಹುಮಾನ ಪಡೆದಿದೆ.
ಉದಯ್ ಅವರು ಪ್ರಸ್ತುತ ರೈತ ಸಮಸ್ಯೆಯ ಕುರಿತಾಗಿ ವ್ಯಂಗ್ಯಚಿತ್ರ ರಚಿಸಿದ್ದರು. ರಾಜ್ಯದಾದ್ಯಂತ 95 ಸ್ಪರ್ಧಿಗಳು ಭಾಗವಹಿಸಿದ್ದರು. ಇವರು ವಿಟ್ಲದ ವಿಠಲ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.