ADVERTISEMENT

ಶಾಸಕ ಜೀವರಾಜ್ ವಿರುದ್ಧ ಭೂ ಕಬಳಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 19:30 IST
Last Updated 31 ಮಾರ್ಚ್ 2018, 19:30 IST

ಕೊಪ್ಪ: ಶೃಂಗೇರಿ ಶಾಸಕ ಡಿ.ಎನ್.ಜೀವರಾಜ್ ಅವರು ಕೊಪ್ಪ ತಾಲ್ಲೂಕಿನ ಜಯಪುರ ಗ್ರಾಮದಲ್ಲಿ ಇನ್ನೊಬ್ಬರ ಜಾಗವನ್ನು ಕಬಳಿಸಿ ಲಾಭ ಮಾಡಿಕೊಂಡಿದ್ದಾರೆ ಎಂದು ತಹಶೀಲ್ದಾರರಿಗೆ ದೂರು ಸಲ್ಲಿಸಲಾಗಿದೆ.

ಜಯಪುರ ಶೆಟ್ರುತೋಟದ ಎಸ್.ಎ. ಉದಯಕುಮಾರ್ ಬಿನ್ ಅನಂತಯ್ಯ ಎಂಬುವವರು ದೂರು ಸಲ್ಲಿಸಿದ್ದು, ಶಾಸಕರ ವಶದಲ್ಲಿರುವ ತಮ್ಮ ಜಾಗ ಬಿಡಿಸಿ
ಕೊಡುವಂತೆ ಮನವಿ ಮಾಡಿದ್ದಾರೆ.

‘ಜಯಪುರ ಗ್ರಾಮದ ಸರ್ವೇ ನಂಬರ್ 9ರಲ್ಲಿ ನನಗೆ ಪಿತ್ರಾರ್ಜಿತವಾಗಿ ಬಂದಿರುವ 26 ಗುಂಟೆ ಜಾಗದ ಪಕ್ಕದ ಸರ್ವೇ ನಂಬರ್ 12ರಲ್ಲಿ 21 ಗುಂಟೆ ಜಮೀನು ಖರೀದಿಸಿದ್ದ ಶಾಸಕ ಜೀವರಾಜ್ ನನ್ನ ಜಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ. ಇಲ್ಲಿ ಪೆಟ್ರೋಲ್ ಬಂಕ್ ಸ್ಥಾಪಿಸಲಾಗಿದ್ದು, ಸುಳ್ಳು ದಾಖಲೆಗಳನ್ನು ನೀಡಿ ಬಾಡಿಗೆ ಹೆಸರಿನಲ್ಲಿ ತಿಂಗಳಿಗೆ ₹25 ಸಾವಿರದಷ್ಟು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.