
ಪ್ರಜಾವಾಣಿ ವಾರ್ತೆಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರ ಶೋಷಣೆಗೆ ನೊಂದು ಅಭಿನಯದಿಂದ ದೂರವಾಗುವ ನಿರ್ಣಯ ಕೈಗೊಂಡಿರುವುದಾಗಿ ಕನ್ನಡದ ’ನಂಬರ್ ಒನ್’ ಚಿತ್ರನಟಿ ರಮ್ಯಾ ತಿಳಿಸಿದ್ದಾರೆ.
ಚಿತ್ರರಂಗದಿಂದ ಸ್ವಯಂ ನಿವೃತ್ತಿ ಹೊಂದುತ್ತಿರುವ ವಿಷಯವನ್ನು ಅವರು ಅಂತರ್ಜಾಲದ ತಮ್ಮ ಟ್ವಿಟ್ಟರ್ ಪುಟಗಳಲ್ಲಿ ಪ್ರಕಟಿಸಿದ್ದಾರೆ. ‘ಹೋರಾಡುವ ಶಕ್ತಿ ನನ್ನಲ್ಲೆಗ ಉಳಿದಿಲ್ಲ. ನನ್ನ ಬದುಕಿನ ಅವಧಿ ಕಡಿಮೆಯಾಗುತ್ತಿದೆ. ಹಾಗಾಗಿ ಚಿತ್ರರಂಗದಿಂದ ದೂರವಾಗಲು ನಿರ್ಣಯಿಸಿದ್ದು, ಹೊಸ ಬದುಕು ಆರಂಭಿಸುವತ್ತ ಗಮನಹರಿಸಿದ್ದೇನೆ’ ಎಂದು ಹೇಳಿದ್ದಾರೆ.
ರಮ್ಯಾ ಅವರ ಸಿನಿಮಾ ನಿವೃತ್ತಿಯ ನಿರ್ಣಯವನ್ನು ಅವರ ಅಭಿಮಾನಿಗಳು ವಿರೋಧಿಸಿದ್ದು, ‘ನಾವು ನಿಮ್ಮೊಂದಿಗಿರುತ್ತೇವೆ, ಚಿತ್ರರಂಗದಲ್ಲಿ ಮುಂದುವರೆಯಿರಿ’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.