ADVERTISEMENT

ಶ್ರೀರಂಗಪಟ್ಟಣ: ಮನೆಯಲ್ಲಿ ಸುರಂಗ ಮಾರ್ಗ ಪತ್ತೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2017, 19:30 IST
Last Updated 2 ಅಕ್ಟೋಬರ್ 2017, 19:30 IST
ಶ್ರೀರಂಗಪಟ್ಟಣ: ಮನೆಯಲ್ಲಿ ಸುರಂಗ ಮಾರ್ಗ ಪತ್ತೆ
ಶ್ರೀರಂಗಪಟ್ಟಣ: ಮನೆಯಲ್ಲಿ ಸುರಂಗ ಮಾರ್ಗ ಪತ್ತೆ   

ಶ್ರೀರಂಗಪಟ್ಟಣ: ಪಟ್ಟಣದ ಕೊಳದ ಗುಡಿ ಬೀದಿಯ ಶತಮಾನದಷ್ಟು ಹಳೆಯ ಮನೆಯೊಂದರಲ್ಲಿ ಸುರಂಗ ಮಾರ್ಗ ಕಂಡು ಬಂದಿದೆ.

ಶಶಿಕುಮಾರ್‌ ಎಂಬುವರ ಮನೆಯ ಮಧ್ಯ ಭಾಗದಲ್ಲಿ ಈ ಸುರಂಗ ಪತ್ತೆಯಾಗಿದೆ. ‘ತೂತು ಬಿದಿದ್ದ ಸ್ಥಳದಲ್ಲಿ ಕುಸಿದಿದ್ದ ಗಾರೆ ಚೆಕ್ಕೆ ತೆಗೆದು ನೋಡಿದಾಗ ಸುರಂಗ ಕಾಣಿಸಿತು’ ಎಂದು ಅವರು ತಿಳಿಸಿದ್ದಾರೆ.

ನೆಲ ಮಟ್ಟದಿಂದ ಸುಮಾರು 6 ಅಡಿ ಆಳದ ವರೆಗೆ ಗುಂಡಿ ಬಿದ್ದಿದ್ದು, ಅಲ್ಲಿಂದ ಬಲಕ್ಕೆ ಈ ಸುರಂಗ ಮಾರ್ಗ ಮುನ್ನಡೆದಂತೆ ಕಾಣುತ್ತದೆ. 15 ಅಡಿಯ ನಂತರ ಇದು ಮುಚ್ಚಿ ಹೋದಂತಿದೆ. ಸುಮಾರು 4 ಅಡಿ ಅಗಲ ಇರುವ ಸುರಂಗ ಮಾರ್ಗದಲ್ಲಿ ಏಕಕಾಲದಲ್ಲಿ ಮೂರು ಜನ ಪ್ರವೇಶಿಸಬಹುದಾದಷ್ಟು ಸ್ಥಳಾವಕಾಶವಿದೆ.

ADVERTISEMENT

ಸುಟ್ಟ ಇಟ್ಟಿಗೆ ಮತ್ತು ಚುರಕಿ ಗಾರೆ ಬಳಸಿ ಸುರಂಗ ಮಾರ್ಗವನ್ನು ನಿರ್ಮಿಸಲಾಗಿದೆ. ಅಲ್ಲಲ್ಲಿ ಕಲ್ಲು ಚಪ್ಪಡಿಗಳೂ ಕಾಣಿಸುತ್ತಿವೆ. ಇದು ಯಾವ ಕಾಲದಲ್ಲಿ ನಿರ್ಮಾಣವಾಗಿದೆ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಎರಡು ವರ್ಷಗಳ ಹಿಂದೆ ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದಲ್ಲಿ ಇಂತಹದ್ದೇ ಸುರಂಗ ಪತ್ತೆಯಾಗಿತ್ತು.

‘ಇದು 120 ವರ್ಷಗಳಷ್ಟು ಹಳೆಯದಾದ ಮನೆ. ಹಲವು ವರ್ಷಗಳಿಂದ ನಾನು ಮತ್ತು ನನ್ನ ತಾಯಿ ಇಲ್ಲಿ ವಾಸಿಸುತ್ತಿದ್ದೇವೆ. ದಿಢೀರ್‌ ಕುಸಿದಿದ್ದರಿಂದ ಸುರಂಗ ಇರುವುದು ಗೊತ್ತಾಗಿದೆ’ ಎಂದು ಶಶಿಕುಮಾರ್‌ ಹೇಳಿದರು.

ಶ್ರೀರಂಗಪಟ್ಟಣವನ್ನು ಹಲವು ರಾಜರು ಆಳ್ವಿಕೆ ಮಾಡಿದ್ದು, ಸಾಕಷ್ಟು ಐತಿಹಾಸಿಕ ಕುರುಹುಗಳಿವೆ. ಸ್ಥಳ ಪರಿಶೀಲಿಸಿ ಸುರಂಗ ಮಾರ್ಗದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು
ಎನ್‌.ಎನ್‌. ಗೌಡ
ರಾಜ್ಯ ಪ್ರಾಚ್ಯವಸ್ತು ಇಲಾಖೆ ಸಹಾಯಕ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.