ಬೆಂಗಳೂರು: ಇದೇ 2ರಂದು ರಾಜ್ಯದ ಎಲ್ಲೆಡೆ ಜಾರಿಗೆ ಬಂದಿರುವ `ಸಕಾಲ~ ಯೋಜನೆಯಡಿ ಒಟ್ಟು 69,890 ಅರ್ಜಿಗಳು ಬಂದಿದ್ದು, 20,049 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಕಂದಾಯ ಇಲಾಖೆ ಅತಿ ಹೆಚ್ಚು (35,569) ಅರ್ಜಿಗಳನ್ನು ಸ್ವೀಕರಿಸಿದೆ. ಇವುಗಳಲ್ಲಿ 1,594 ಅರ್ಜಿಗಳು ವಿಲೇವಾರಿ ಆಗಿವೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ 14,664 ಅರ್ಜಿಗಳು ಬಂದಿದ್ದು, 8,426 ಅರ್ಜಿಗಳು ವಿಲೇವಾರಿ ಆಗಿವೆ. ಜಿಲ್ಲಾವಾರು ಲೆಕ್ಕಾಚಾರದಲ್ಲಿ ಇದು ಅತಿಹೆಚ್ಚು. ಯಾದಗಿರಿ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಅರ್ಜಿಗಳು ಬಂದಿವೆ. ಈ ಜಿಲ್ಲೆಯಲ್ಲಿ ಸ್ವೀಕೃತವಾಗಿದ್ದ 825 ಅರ್ಜಿಗಳ ಪೈಕಿ 137 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ವಾರ್ತಾ ಇಲಾಖೆಯ ಪ್ರಕಟಣೆ ತಿಳಿಸಿದೆ.
ಸಾರಿಗೆ ಇಲಾಖೆಗೆ ಬಂದಿದ್ದ 14,072 ಅರ್ಜಿಗಳ ಪೈಕಿ 3,575 ಅರ್ಜಿಗಳು ವಿಲೇವಾರಿಯಾಗಿವೆ. ವಾಣಿಜ್ಯ ತೆರಿಗೆ ಇಲಾಖೆಗೆ ಬಂದಿದ್ದ 13,412 ಅರ್ಜಿಗಳ ಪೈಕಿ 10,949 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. `ಸಕಾಲ~ ಜಾರಿಗೆ ಬಂದು ನಾಲ್ಕು ದಿನಗಳು ಕಳೆದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.