ADVERTISEMENT

ಸದನ ಸಮಿತಿ: ವಿರೋಧ ಪಕ್ಷಗಳ ಮನವೊಲಿಕೆಗೆ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 19:30 IST
Last Updated 19 ಫೆಬ್ರುವರಿ 2012, 19:30 IST

ಬಾಗಲಕೋಟೆ: ಸದನದಲ್ಲಿ ಬ್ಲೂಫಿಲ್ಮಂ ವೀಕ್ಷಣೆ ಪ್ರಕರಣದ ಸತ್ಯಾಸತ್ಯತೆ ಅರಿಯಲು ಸ್ಪೀಕರ್ ಬೋಪಯ್ಯ ನೇಮಿಸಿರುವ ಸದನ ಸಮಿತಿಗೆ ವಿರೋಧ ವ್ಯಕ್ತಪಡಿಸುತ್ತಿರುವ ವಿರೋಧ ಪಕ್ಷಗಳ ಮನ ಒಲಿಸಲು ಯತ್ನಿಸುವುದಾಗಿ ಕಾನೂನು ಸಚಿವ ಎಸ್. ಸುರೇಶಕುಮಾರ್ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಲೂಫಿಲ್ಮಂ ವೀಕ್ಷಣೆ ಪ್ರಕರಣ ಸದನ ಮುಗಿದ ಬಳಿಕ ಬಹಿರಂಗವಾಗಿದೆ, ಸಚಿವರು ಬ್ಲೂಫಿಲ್ಮಂ ವೀಕ್ಷಿಸುತ್ತಿರುವುದು ಪ್ರತ್ಯಕ್ಷವಾಗಿ ಸ್ಪೀಕರ್ ಗಮನಕ್ಕೆ ಬಂದಿದ್ದರೆ ತನಿಖೆ ಅಗತ್ಯ ಇರಲಿಲ್ಲ. ಹಾಗಾಗಿ ಅದರ ನೈಜತೆ ಅರಿಯಲು ಸದನ ಸಮಿತಿ ವರದಿ ಅಗತ್ಯ ಎಂದರು.

ಲೋಕಸಭಾ ಅಧಿವೇಶನದಲ್ಲಿ ಸಂಸದರು ನೋಟಿನ ಕಂತೆಗಳನ್ನು ಪ್ರದರ್ಶಿಸಿದ ಘಟನೆಯನ್ನು ಸ್ಪೀಕರ್ ಸೋಮನಾಥ ಚಟರ್ಜಿ ಪ್ರತ್ಯಕ್ಷವಾಗಿ ವೀಕ್ಷಿಸಿದ್ದರೂ ಸಹ ಅವರು ಸದನ ಸಮಿತಿ ನೇಮಕ ಮಾಡಿ, ವರದಿ ಬಂದ ಬಳಿಕ ಕ್ರಮ ಕೈಗೊಂಡಿರುವ ಪ್ರಕರಣವನ್ನು ಉದಾಹರಿಸಿದ ಅವರು ಅಂತೆಯೇ ಈ ಪ್ರಕರಣಕ್ಕೂ ಸದನ ಸಮಿತಿ  ತನಿಖೆ ಅಗತ್ಯ ಇದೆ ಎಂದು ಅವರು ಪ್ರತಿಪಾದಿಸಿದರು.

ಕಳಂಕಿತರ ಶಾಸಕತ್ವವನ್ನು ರದ್ದು ಮಾಡುವವರೆಗೆ ಸದನದಿಂದ ಹೊರಗುಳಿಯುವುದಾಗಿ ಪ್ರತಿಪಕ್ಷಗಳು ಮುಖಂಡರ  ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸದನ ಸಮಿತಿ ವರದಿ ಬರುವವರೆಗೂ ಕಳಂಕಿತರನ್ನು ಸದನದಿಂದ ಹೊರಗಿಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.