ADVERTISEMENT

ಸರಗಳವು: ಇರಾನಿ ಗ್ಯಾಂಗ್‌ನ 6 ಮಂದಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2016, 13:21 IST
Last Updated 12 ಆಗಸ್ಟ್ 2016, 13:21 IST
ಸರಗಳವು: ಇರಾನಿ ಗ್ಯಾಂಗ್‌ನ 6 ಮಂದಿಗೆ ಜೀವಾವಧಿ ಶಿಕ್ಷೆ
ಸರಗಳವು: ಇರಾನಿ ಗ್ಯಾಂಗ್‌ನ 6 ಮಂದಿಗೆ ಜೀವಾವಧಿ ಶಿಕ್ಷೆ   

ಬೆಂಗಳೂರು: ಸರಗಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇರಾನಿ ಗ್ಯಾಂಗ್‌ನ ಆರು ಮಂದಿಗೆ ಬೆಳಗಾವಿಯ 1ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ವೆಂಕಟೇಶ ನಾಯಕ ಅವರು ಆರೋಪಿಗಳಾದ ಮಹಮದ್ ಇರಾನಿ, ಶಾರುಕ್ ಶೇಖ್‌, ಅಬ್ಬಾಸ್ ಇರಾನಿ, ಹೈದರ್ ಇರಾನಿ, ರಫಿಕ್‌ ಶೇಖ್ ಮತ್ತು ಸಲೀಂ ಶೇಖ್‌ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದರು.

ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಐ.ಮಕಾಂದರ ವಾದ ಮಂಡಿಸಿದ್ದರು. ಆರೋಪಿಗಳು ಬೆಳಗಾವಿ ನಗರದಲ್ಲಿ 2015ರಲ್ಲಿ 33 ಕಡೆ ಸರಗಳವು ಮಾಡಿದ್ದರು. ಬಳಿಕ ವಿಶೇಷ ತಂಡ ರಚಿಸಿ ಆರೋಪಿಗಳನ್ನು ಬಂಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.