ADVERTISEMENT

ಸಹಜ ಸ್ಥಿತಿಗೆ ಮಂಗಳೂರು

​ಪ್ರಜಾವಾಣಿ ವಾರ್ತೆ
Published 30 ಮೇ 2018, 19:30 IST
Last Updated 30 ಮೇ 2018, 19:30 IST
ಮಂಗಳೂರಿನಲ್ಲಿ ಬುಧವಾರ ಕಾಲುವೆಯೊಂದರಿಂದ ಹೂಳು ತೆಗೆಯುತ್ತಿದ್ದ ದೃಶ್ಯ. –ಪ್ರಜಾವಾಣಿ ಚಿತ್ರ
ಮಂಗಳೂರಿನಲ್ಲಿ ಬುಧವಾರ ಕಾಲುವೆಯೊಂದರಿಂದ ಹೂಳು ತೆಗೆಯುತ್ತಿದ್ದ ದೃಶ್ಯ. –ಪ್ರಜಾವಾಣಿ ಚಿತ್ರ   

ಮಂಗಳೂರು: ಮಂಗಳವಾರ ಸುರಿದ ಮಳೆಯಿಂದ ತತ್ತರಿಸಿದ ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಮಳೆ ಬಿಡುವು ನೀಡಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿದೆ. ವಾಹನಗಳ ಸಂಚಾರ, ಜನಜೀವನ ಎಂದಿನಂತ್ತಿತ್ತು.

ಬುಧವಾರ ಮಳೆ ಬಿಡುವು ಕೊಟ್ಟ ಕಾರಣ ಪರಿಹಾರ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಲು ಸಾಧ್ಯವಾಯಿತು. ಬೆಳಿಗ್ಗೆಯಿಂದಲೇ ಮಹಾನಗರ ಪಾಲಿಕೆ ಸಿಬ್ಬಂದಿ ಚರಂಡಿಯಲ್ಲಿ ತುಂಬಿದ್ದ ಹೂಳು ತೆರವುಗೊಳಿಸಿದರು. ಕೆಲವೆಡೆ ಮನೆಗಳಿಗೆ ನುಗ್ಗಿದ್ದ ನೀರನ್ನು ಹೊರಕ್ಕೆ ಹಾಕುವ ಕೆಲಸದಲ್ಲಿ ಜನರು ನಿರತರಾಗಿದ್ದರು.

ಮುಂಜಾಗ್ರತಾ ಕ್ರಮವಾಗಿ ಶಾಲೆ, ಪದವಿಪೂರ್ವ ಕಾಲೇಜುಗಳು ರಜೆ ಘೋಷಿಸಿದ್ದು, ಮಕ್ಕಳು ಮನೆಯಲ್ಲಿಯೇ ಉಳಿದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.