ADVERTISEMENT

ಸಾ.ಶಿ.ಮರುಳಯ್ಯಗೆ ಸಂದೇಶ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 17:00 IST
Last Updated 1 ಫೆಬ್ರುವರಿ 2011, 17:00 IST

ಮಂಗಳೂರು: ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ 2011ನೇ ಸಾಲಿನ ‘ಸಂದೇಶ ಪ್ರಶಸ್ತಿ’ಗೆ ಹಿರಿಯ ಸಾಹಿತಿ ಸಾ.ಶಿ.ಮರುಳಯ್ಯ, ಹಾಸ್ಯ ಬರಹಗಾರ ಎಂ.ಎಸ್.ನರಸಿಂಹಮೂರ್ತಿ ಸೇರಿದಂತೆ 10 ಮಂದಿ ಆಯ್ಕೆಯಾಗಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಸಂದೇಶ ಪ್ರಶಸ್ತಿ ಆಯ್ಕೆ ಮಂಡಳಿ ಅಧ್ಯಕ್ಷ ಡಾ. ನಾ.ಡಿಸೋಜ, ಸಾ.ಶಿ.ಮರುಳಯ್ಯ (ಸಂದೇಶ ಕನ್ನಡ ಸಾಹಿತ್ಯ), ಪಾವ್ಲ್ ಮೊರಾಸ್(ಕೊಂಕಣಿ ಸಾಹಿತ್ಯ), ಕುದ್ಕಾಡಿ ವಿಶ್ವನಾಥ ರೈ(ತುಳು ಸಾಹಿತ್ಯ), ಎಂ.ಎಸ್.ನರಸಿಂಹಮೂರ್ತಿ (ಚಲನಚಿತ್ರ/ಟಿ.ವಿ), ವೀರೇಶ್ವರ ಪುಣ್ಯಾಶ್ರಮ ಗದಗ (ಮಾಧ್ಯಮ ಶಿಕ್ಷಣ), ಸುನೀತ್ ಪ್ರಭು(ಅತ್ಯುತ್ತಮ ಶಿಕ್ಷಕ), ರೇಮಂಡ್ ಡಿಸೋಜ(ವಿಶೇಷ ಪ್ರಶಸ್ತಿ), ವಾಲ್ಟರ್ ಅಲ್ಬುಕರ್ಕ್(ವಿಲ್ಫಿ ರೆಬಿಂಬಸ್ ಸ್ಮಾರಕ ಕೊಂಕಣಿ ಸಂಗೀತ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ರೂ. 10 ಸಾವಿರ ನಗದು, ಸ್ಮರಣಿಕೆ, ಸನ್ಮಾನ ಪತ್ರ ಒಳಗೊಂಡಿದೆ ಎಂದರು.ನಗರದ ಬಜ್ಜೋಡಿಯಲ್ಲಿರುವ ಸಂದೇಶ ಸಂಸ್ಥೆ ಆವರಣದಲ್ಲಿ ಇದೇ 13ರಂದು ಸಂಜೆ 5.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಬಿಷಪ್ ಅಲೋಷಿಯಸ್ ಪಾವ್ಲ್ ಡಿಸೋಜಾ ಅಧ್ಯಕ್ಷತೆ ವಹಿಸುವರು. ಮಂಗಳೂರು ವಿವಿ ಕುಲಪತಿ ಟಿ.ಸಿ.ಶಿವಶಂಕರಮೂರ್ತಿ, ಸಂದೇಶ ಪ್ರತಿಷ್ಠಾನ ಅಧ್ಯಕ್ಷ ಹೆನ್ರಿ ಡಿಸೋಜಾ ಪಾಲ್ಗೊಳ್ಳುವರು.

ರಿಚರ್ಡ್ ಲೂಯಿಸ್, ನಾ.ದಾಮೋದರ ಶೆಟ್ಟಿ, ಮಾರ್ಕ್ ವಾಲ್ಡರ್, ಸಾರಾ ಅಬೂಬಕ್ಕರ್, ಚಂದ್ರಕಲಾ ನಂದಾವರ, ಚಾರ್ಲ್ಸ್ ವಾಸ್, ಜೊಯೆಲ್ ಪಿರೇರಾ, ಕನ್ಸೆಪ್ಟಾ ಫರ್ನಾಂಡಿಸ್ ಆಳ್ವ ಆಯ್ಕೆ ಸಮಿತಿಯಲ್ಲಿದ್ದರು ಎಂದರು.ಸಂದೇಶ ಪ್ರತಿಷ್ಠಾನ ನಿರ್ದೇಶಕ ವಲೇರಿಯನ್ ಮೆಂಡೋನ್ಸಾ ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.