ADVERTISEMENT

ಸಾಹಿತಿ ಮರಿದೇವರು ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2018, 19:30 IST
Last Updated 25 ಮಾರ್ಚ್ 2018, 19:30 IST
ಸಿ.ಎಚ್.ಮರಿದೇವರು
ಸಿ.ಎಚ್.ಮರಿದೇವರು   

ತುಮಕೂರು: ಶಿಕ್ಷಣ ತಜ್ಞ ಹಾಗೂ ಸಾಹಿತಿ ಸಿ.ಎಚ್.ಮರಿದೇವರು (84) ಭಾನುವಾರ ಸಂಜೆ ಬೆಂಗಳೂರಿನ ದಯಾನಂದಸಾಗರ್ ಅಪೋಲೊ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ ಹಾಗೂ ಪುತ್ರ ಸಿ.ಎಂ.ರವಿ ಇದ್ದಾರೆ.

’ಶಿಕ್ಷಣ ತತ್ತ್ವಶಾಸ್ತ್ರ’, ’ಮುನ್ನಡೆದ ಶಿಕ್ಷಣ ಮನಃಶಾಸ್ತ್ರ’ ಕೃತಿಗಳು ಸೇರಿ ಹಲವು ಕೃತಿಗಳನ್ನು ರಚಿಸಿದ್ದರು. ನಗರದಲ್ಲಿ ನೃಪತುಂಗ ಬಿ.ಇಡಿ ಕಾಲೇಜು ಸ್ಥಾಪಿಸಿದ್ದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿಯು ಅವರಿಗೆ ಲಭಿಸಿತ್ತು. ತುಮಕೂರು ನಗರ ಹೊರವಲಯದ ಯಲ್ಲಾಪುರದಲ್ಲಿರುವ ಅವರ ತೋಟದಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ವೀರಶೈವ ಗುರುಕುಲ ವಿದ್ಯಾರ್ಥಿನಿಲಯದ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.