ಸಿಂಧನೂರು: ಪಟ್ಟಣದಲ್ಲಿ ಶನಿವಾರ ಎರಡು ಗುಂಪುಗಳ ಮಧ್ಯೆ ಘರ್ಷಣೆ ಸಂಭವಿಸಿ ಇಬ್ಬರಿಗೆ ತೀವ್ರ ಗಾಯಗಳಾಗಿವೆ. ಗಲಾಟೆ ಕಾರಣ ಪಟ್ಟಣದಲ್ಲಿ ಮಂಗಳವಾರ ಮಧ್ಯ ರಾತ್ರಿವರೆಗೆ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಬಸವ ವೃತ್ತದಲ್ಲಿ ಶುಕ್ರವಾರ ಸಂಜೆ ಗುಂಜಳ್ಳಿ, ಹಟ್ಟಿ ಹಾಗೂ ಮೆಹಬೂಬ ಕಾಲೊನಿಯ ಯುವಕರ ನಡುವೆ ಮಾತಿನ ಚಕಮಕಿ, ಪರಸ್ಪರ ಹಲ್ಲೆ ನಡೆದಿತ್ತು. ಪೊಲೀಸರು ಮತ್ತು ಹಿರಿಯರ ಮಧ್ಯಸ್ಥಿಕೆಯಿಂದ ಸಂಧಾನ ನಡೆದಿತ್ತು. ಆದರೂ ಕೂಡ ಕೆಲ ಯುವಕರು ಅದೇ ದ್ವೇಷದಿಂದ ಶನಿವಾರ ಮಧ್ಯಾಹ್ನ ಏಕಾಏಕಿ ಮೆಹಬೂಬ ಕಾಲೊನಿಗೆ ನುಗ್ಗಿ ಸಿಕ್ಕ-ಸಿಕ್ಕವರ ಮೇಲೆ ಹಲ್ಲೆ ಮಾಡಿದರು. ಅಂಗಡಿಯೊಂದರ ಗಾಜನ್ನು ಒಡೆದು ಹಾಕಿದರು.
ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದರಿಂದ ಹಲ್ಲೆ ಮಾಡಲು ಹೋಗಿದ್ದ ಯುವಕರ ತಂಡ ಅಲ್ಲಿಯೇ 11ದ್ವಿಚಕ್ರ ವಾಹನಗಳನ್ನು ಬಿಟ್ಟು ಓಡಿ ಹೋದರು ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.