ADVERTISEMENT

ಸಿದ್ದಗಂಗೆಯಲ್ಲಿ ಗುರುವಂದನೆ ಸಂಭ್ರಮ

ಶಿವಕುಮಾರ ಸ್ವಾಮೀಜಿ 106ನೇ ಜನ್ಮ ದಿನೋತ್ಸವ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2014, 19:30 IST
Last Updated 20 ಫೆಬ್ರುವರಿ 2014, 19:30 IST
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಗುರುವಾರ ಶಿವಕುಮಾರ ಸ್ವಾಮೀಜಿ ಅವರ ಗುರುವಂದನೆ ಕಾರ್ಯಕ್ರಮಕ್ಕೂ ಮುನ್ನ ರಾಜ್ಯಪಾಲ ಎಚ್‌.ಆರ್‌.ಭಾರದ್ವಾಜ್‌ ಅವರು ಸ್ವಾಮೀಜಿ ಜತೆ ಕುಶಲೋಪರಿ ನಡೆಸಿದರು
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಗುರುವಾರ ಶಿವಕುಮಾರ ಸ್ವಾಮೀಜಿ ಅವರ ಗುರುವಂದನೆ ಕಾರ್ಯಕ್ರಮಕ್ಕೂ ಮುನ್ನ ರಾಜ್ಯಪಾಲ ಎಚ್‌.ಆರ್‌.ಭಾರದ್ವಾಜ್‌ ಅವರು ಸ್ವಾಮೀಜಿ ಜತೆ ಕುಶಲೋಪರಿ ನಡೆಸಿದರು   

ತುಮಕೂರು: ಸಿದ್ದಗಂಗಾ ಮಠದಲ್ಲಿ ಗುರುವಾರ ಡಾ.ಶಿವಕುಮಾರ ಸ್ವಾಮೀಜಿ ಅವರ 106ನೇ ಜನ್ಮ­ದಿನೋ­ತ್ಸವ ಹಾಗೂ ಗುರುವಂದನೆ ಕಾರ್ಯ­ಕ್ರಮ ಅದ್ದೂರಿಯಾಗಿ ನೇರವೇರಿತು.

ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಸ್ವಾಮೀಜಿ ದರ್ಶನ ಪಡೆದರು. ಗುರುವಂದನೆ ಸಲ್ಲಿ­ಸಲು ಭಕ್ತರು ಬುಧವಾರ ರಾತ್ರಿ­ಯಿಂದಲೇ ಮಠಕ್ಕೆ ತಂಡೋ­ಪತಂಡ­ವಾಗಿ ಆಗಮಿಸಿ ಬೀಡು ಬಿಟ್ಟಿದ್ದರು.

ಮೂವತ್ತೊಂಬತ್ತು ದಿನ ಕಳೆದರೆ ಸ್ವಾಮೀಜಿ (ಏಪ್ರಿಲ್‌ 1ಕ್ಕೆ) 107ನೇ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ಮತ್ತೊಂದು ಸಂಭ್ರಮ ಹತ್ತಿರದ­ಲ್ಲಿ­ದ್ದರೂ 106ನೇ ಜನ್ಮದಿನಾಚರಣೆ­ಯಲ್ಲಿ ಪಾಲ್ಗೊಳ್ಳಲು ವಿವಿಧೆ­ಡೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ಎಪ್ಪತ್ತಕ್ಕೂ ಹೆಚ್ಚು ಮಠಗಳ ಮಠಾಧೀಶರು ಪಾಲ್ಗೊಂಡು ಶುಭ ಹಾರೈಸಿದರು.

ಮಠದ ಆವರಣದಲ್ಲಿ ನಿರ್ಮಿಸಿರುವ ಬೃಹತ್‌ ನಂದಿ ವಿಗ್ರಹ, ಈಶ್ವರ ಲಿಂಗವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಲೋಕಾರ್ಪಣೆ ಮಾಡಿದರು. ಸಮಾರಂಭದಲ್ಲಿ ಮಾತನಾಡಿದ ರಾಜ್ಯಪಾಲ ಎಚ್‌.ಆರ್‌.ಭಾರದ್ವಾಜ್‌, ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಇತರರು ಶಿವಕುಮಾರ ಸ್ವಾಮೀಜಿ ಸೇವೆ ಸ್ಮರಿಸಿದರು.

ಬೆಂಗಳೂರಿನಲ್ಲಿ 107ನೇ ಜನ್ಮದಿನಾಚರಣೆ: ಶಿವಕುಮಾರ ಸ್ವಾಮೀಜಿ ಅವರ 107ನೇ ಜನ್ಮ­ದಿನೋತ್ಸವವನ್ನು ಬೆಂಗಳೂರಿನಲ್ಲಿ ಜೂನ್‌–ಜುಲೈನಲ್ಲಿ 3 ದಿನ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ವಿ.­ಸೋಮಣ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.