ADVERTISEMENT

ಸಿದ್ದರಾಮಯ್ಯ ಅವಧಿಯಲ್ಲೇ ಅತಿ ಹೆಚ್ಚು ಸಾಲ: ಜೋಶಿ ಆರೋಪ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2018, 19:30 IST
Last Updated 28 ಮಾರ್ಚ್ 2018, 19:30 IST

ಬಾಗಲಕೋಟೆ: ‘ಹಿಂದಿನ ಯಾವ ಮುಖ್ಯಮಂತ್ರಿಗಳೂ ಮಾಡದಷ್ಟು ಸಾಲವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬರೇ ಮಾಡಿದ್ದಾರೆ. ಹಾಗಾಗಿ ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್‌ ಶಾ ಲೆಕ್ಕ ಕೇಳುತ್ತಿದ್ದಾರೆ’ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

‘ಕಡಿದಾಳ ಮಂಜಪ್ಪ ಮೊದಲುಗೊಂಡು ಜಗದೀಶ ಶೆಟ್ಟರ್‌ವರೆಗೆ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿದ್ದ ಎಲ್ಲಾ ಮುಖ್ಯಮಂತ್ರಿಗಳು ಮಾಡಿದ ಸಾಲ ₹1.12 ಲಕ್ಷ ಕೋಟಿ ಇದ್ದರೆ,  ಸಿದ್ದರಾಮಯ್ಯ ಅವಧಿಯಲ್ಲಿ ಮಾಡಿದ ಸಾಲ ₹ 1.42 ಲಕ್ಷ ಕೋಟಿ. ಲೆಕ್ಕ ಕೇಳುವ ಹಕ್ಕು ಈ ದೇಶದ ಎಲ್ಲ ನಾಗರಿಕರಿಗೂ ಇದೆ. ಹಾಗಾಗಿ ಅಮಿತ್‌ ಶಾ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ ನೀಡಲಿ’ ಎಂದು ಜೋಶಿ ಆಗ್ರಹಿಸಿದರು.

13ನೇ ಹಣಕಾಸು ಆಯೋಗದ ಅವಧಿಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ₹ 88 ಸಾವಿರ ಕೋಟಿ ಅನುದಾನ ನೀಡಿದ್ದರೆ 14ನೇ ಹಣಕಾಸು ಆಯೋಗ ₹ 2.19 ಲಕ್ಷ ಕೋಟಿ ನೀಡಿದೆ. ಇಷ್ಟೊಂದು ಅನುದಾನ ನೀಡಿದರೂ ಸಾಲ ಹೆಚ್ಚಳವಾಗಿರುವುದು ಏಕೆ ಎಂಬುದನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಲಿ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.