
ಪ್ರಜಾವಾಣಿ ವಾರ್ತೆರಾಯಚೂರು: ಲೋಕಸಭಾ ಚುನಾವಣೆಗೆ ರಾಜ್ಯದ 8 ಕ್ಷೇತ್ರಗಳಲ್ಲಿ ಸಿಪಿಐಎಂಎಲ್ ಪಕ್ಷವು ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ ಎಂದು ಸಿಪಿಐಎಂಎಲ್ ಪಾಲಿಟ್ ಬ್ಯೂರೊ ರಾಜ್ಯ ಸಮಿತಿ ಸದಸ್ಯರಾದ ಆರ್. ಮಾನಸಯ್ಯ ಮತ್ತು ರುದ್ರಯ್ಯ ಮಂಗಳವಾರ ಇಲ್ಲಿ ಪ್ರಕಟಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಕ್ಷೇತ್ರದಿಂದ ಡಿ.ಎಸ್ ನಿರ್ವಾಣಪ್ಪ, ಚಾಮರಾಜನಗರ– ಶ್ರೀನಿವಾಸ ಕಂದೇಗಾಲ, ಶಿವಮೊಗ್ಗ–ಪಿ ಮೂರ್ತಿ, ಕೊಪ್ಪಳ – ಕೆ ಡಿ.ಎಚ್ ಪೂಜಾರ, ರಾಯಚೂರು–ಎಂ.ನಾಗರಾಜ, ಉಡುಪಿ– ಚಿಕ್ಕಮಗಳೂರು: ಜಗದೀಶ, ಮತ್ತು ಬಳ್ಳಾರಿ ಕ್ಷೇತ್ರದಿಂದ– ಮಲ್ಲಿನಾಥ ಸ್ಪರ್ಧಿಸುತ್ತಿದ್ದು, ಬೆಂಗಳೂರು ಉತ್ತರ ಕ್ಷೇತ್ರದಿಂದ ತಾವೇ ಟಿಕೆಟ್ ಬಯಸಿದ್ದು, ಪಕ್ಷ ಇನ್ನೂ ಅಂತಿಮ ತೀರ್ಮಾನ ಮಾಡಿಲ್ಲ ಎಂದು ಆರ್.ಮಾನಸಯ್ಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.