ADVERTISEMENT

ಸೆ. 10ಕ್ಕೆ ಮತ ಮರು ಎಣಿಕೆ?

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2012, 19:30 IST
Last Updated 21 ಆಗಸ್ಟ್ 2012, 19:30 IST

ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಮತಗಳ ಮರು ಎಣಿಕೆ ಕಾರ್ಯವನ್ನು  ಸೆ.  10 ರಂದು ನಡೆಸಲು ಅವಕಾಶ ನೀಡು ವಂತೆ ಜಿಲ್ಲಾಡಳಿತವು ರಾಜ್ಯ ಚುನಾ ವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ.

ಮತಗಳ ಮರುಎಣಿಕೆಗೆ ಆದೇಶ ನೀಡಿದ್ದ ಹೈಕೋರ್ಟ್ ತೀರ್ಪನ್ನು ಸಂಸದೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ತಡೆಯಾಜ್ಞೆ ನೀಡಿದ್ದ ಇದೇ 17ರಂದು ಮೇಲ್ಮನವಿಯನ್ನು ತಿರಸ್ಕರಿಸಿ, ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿಯಿತು. ಅಲ್ಲದೇ, ನಾಲ್ಕು ವಾರಗಳೊಳಗೆ ಮರು ಮತಎಣಿಕೆ ಪೂರ್ಣಗೊಳಿಸುವಂತೆಯೂ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಎಲ್ಲ ಸಿದ್ಧತೆಗಳನ್ನೂ ಪೂರ್ಣಗೊಳಿಸ ಲಾಗಿದ್ದು, ಸೆಪ್ಟೆಂಬರ್ 10 ರಂದು ಮರುಎಣಿಕೆ ನಡೆಸಲು ಅನುಮತಿ ನೀಡುವಂತೆ ಜಿಲ್ಲಾ ಚುನಾವಣಾಧಿ ಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.

2009ರ ಏಪ್ರಿಲ್‌ನಲ್ಲಿ ನಡೆದಿದ್ದ 13ನೇ ಲೋಕಸಭೆ ಚುನಾವಣೆ ಯಲ್ಲಿ  2,243 ಮತಗಳ ಅಂತರ ದಿಂದ ಕಾಂಗ್ರೆಸ್‌ನ ಎನ್.ವೈ. ಹನು ಮಂತಪ್ಪ ಸೋತಿದ್ದರು. ಮತ ಎಣಿಕೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಏಜೆಂಟ್ ಆಗಿದ್ದ ಚಂದ್ರಗೌಡ ಎಂಬುವವರು ಅಕ್ರಮ ನಡೆದಿರುವ ಕುರಿತು ಹೈಕೋರ್ಟ್‌ಗೆ ದೂರು ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.