ADVERTISEMENT

ಸ್ಪ್ರಿಂಗ್ ಜೂಕ್: ಇಂದು ವಿಚಾರಣೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2012, 19:30 IST
Last Updated 26 ಮಾರ್ಚ್ 2012, 19:30 IST

ಉಡುಪಿ: ಮಲ್ಪೆಯ ಸೇಂಟ್ ಮೆರೀಸ್ ದ್ವೀಪದಲ್ಲಿ 3ಡಬ್ಲ್ಯು ಕಾನ್ಸೆಪ್ಟ್ ಎಂಬ ಖಾಸಗಿ ಸಂಸ್ಥೆ ಫೆಬ್ರುವರಿ ಆರಂಭದಲ್ಲಿ ಹಮ್ಮಿಕೊಂಡಿದ್ದ  `ಸ್ಪ್ರಿಂಗ್ ಜೂಕ್~- ಅಂತರರಾಷ್ಟ್ರೀಯ ಮಟ್ಟದ ಸಂಗೀತ ಉತ್ಸವದಲ್ಲಿ ಸಂಸ್ಕೃತಿಗೆ ಧಕ್ಕೆ ಬರುವಂತಹ ಘಟನೆಗಳು ನಡೆದಿವೆ ಎಂಬ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ವಿಚಾರಣೆ ನಡೆಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಆದೇಶಿಸಲಾಗಿದೆ.

ಇದೇ 28ರಂದು ಬೆಳಿಗ್ಗೆ 11ಕ್ಕೆ ಸ್ಥಳ ಪರಿಶೀಲನೆ ನಡೆಸಲಾಗುವುದು. ಮಧ್ಯಾಹ್ನ 3 ಮತ್ತು 29 ರಂದು ಬೆಳಿಗ್ಗೆ 11ಕ್ಕೆ ಉಡುಪಿ ಜಿಲ್ಲಾಧಿಕಾರಿ ಕಚೇರಿಸಭಾಂಗಣದಲ್ಲಿ ವಿಚಾರಣೆ ನಡೆಸಲಾಗುವುದು.ಘಟನೆಗೆ ಸಂಬಂಧಪಟ್ಟಂತೆ ಮಾಹಿತಿ ಇರುವ ವ್ಯಕ್ತಿಗಳು ವಿಚಾರಣೆ ಸಂದರ್ಭ ಹಾಜರಾಗಿ, ಲಿಖಿತ ಹೇಳಿಕೆ ಅಥವಾ ಮೌಖಿಕ ಹೇಳಿಕೆ ನೀಡುವಂತೆ ಪ್ರಾದೇಶಿಕ ಆಯುಕ್ತರು ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.