ADVERTISEMENT

ಹರಿವು ಹೆಚ್ಚಳ: ತುಂಗಭದ್ರಾ ಜಲಾಶಯಕ್ಕೆ ಒಂದೇ ದಿನ ಎರಡು ಟಿಎಂಸಿ ನೀರು

​ಪ್ರಜಾವಾಣಿ ವಾರ್ತೆ
Published 14 ಜೂನ್ 2018, 10:17 IST
Last Updated 14 ಜೂನ್ 2018, 10:17 IST
ತುಂಗಭದ್ರಾ ಜಲಾಶಯದ ನೋಟ
ತುಂಗಭದ್ರಾ ಜಲಾಶಯದ ನೋಟ   

ಹೊಸಪೇಟೆ(ಬಳ್ಳಾರಿ): ತುಂಗಭದ್ರಾ ಜಲಾಶಯದ ಒಳಹರಿವು ಭಾರಿ ಹೆಚ್ಚಳವಾಗಿದ್ದು, ಒಂದೇ ದಿನದಲ್ಲಿ ಎರಡು ಟಿ.ಎಂ.ಸಿ.ಅಡಿಗಿಂತಲೂ‌ ಅಧಿಕ ನೀರು ಅಣೆಕಟ್ಟೆಗೆ ಹರಿದು ಬಂದಿದೆ.

ಬುಧವಾರ ಅಣೆಕಟ್ಟೆಯಲ್ಲಿ 5.31 ಟಿ.ಎಂ.ಸಿ. ಅಡಿ ನೀರಿನ ಸಂಗ್ರಹವಿತ್ತು. ಗುರುವಾರ 7.75 ಟಿ.ಎಂ.ಸಿ. ಅಡಿಗೆ ಏರಿಕೆಯಾಗಿದೆ. 28,367 ಕ್ಯುಸೆಕ್ ಒಳಹರಿವು ದಾಖಲಾಗಿದೆ. ಬುಧವಾರ 6,878 ಕ್ಯುಸೆಕ್ ಒಳಹರಿವು ಇತ್ತು.

ಶಿವಮೊಗ್ಗ ಜಿಲ್ಲೆಯ ತುಂಗಾ ಜಲಾಶಯ ತುಂಬಿದ್ದು, ಕ್ರಸ್ಟ್ ಗೇಟ್ ಗಳ ಮೂಲಕ ನೀರು ಹರಿಸುತ್ತಿರುವುದು ಹಾಗೂ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.