ADVERTISEMENT

ಹವಾಮಾನ ವರದಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 19:30 IST
Last Updated 20 ಸೆಪ್ಟೆಂಬರ್ 2011, 19:30 IST

ರಾಜ್ಯದಾದ್ಯಂತ ಮಳೆ ಸಾಧ್ಯತೆ

ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಹಲವೆಡೆ ಮಳೆಯಾಗಿದ್ದು, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅತ್ಯಧಿಕ 8 ಸೆಂ.ಮೀ. ಮಳೆಯಾಗಿದೆ.
ಬೆಂಗಳೂರು ನಗರ, ಮಧುಗಿರಿಯಲ್ಲಿ 6, ನೆಲಮಂಗಲ, ಗುಡಿಬಂಡೆಯಲ್ಲಿ 5, ಮುಳಬಾಗಿಲಿನಲ್ಲಿ 4, ಬೆಳ್ತಂಗಡಿ, ಸುಬ್ರಹ್ಮಣ್ಯ, ಕೆ.ಆರ್.ನಗರ, ರಾಯಲಪಡು, ಗೌರಿಬಿದನೂರು, ಕುಣಿಗಲ್‌ನಲ್ಲಿ 3,

ಧರ್ಮಸ್ಥಳ, ಗೋಕರ್ಣ, ಅಂಕೋಲ, ಹಾರಂಗಿ, ಆನೇಕಲ್, ಹೊಸಕೋಟೆ, ದೇವನಹಳ್ಳಿ, ಕೊರಟಗೆರೆ, ಚಿಂತಾಮಣಿ, ಬಾಗೇಪಲ್ಲಿ, ಮಾಲೂರು, ರಾಮನಗರದಲ್ಲಿ 2, ಕಾರವಾರ, ಹಾವೇರಿ, ಮಡಿಕೇರಿ, ಕೊಟ್ಟಿಗೆಹಾರ, ಕೋಲಾರ, ಬಂಗಾರಪೇಟೆ, ಹೆಸರಘಟ್ಟ, ದೊಡ್ಡಬಳ್ಳಾಪುರ, ಚನ್ನಗಿರಿ, ಚಿಕ್ಕಬಳ್ಳಾಪುರ, ತೊಂಡೆಬಾವಿ, ಮಾಗಡಿ, ಬೆಂಗಳೂರು ಗ್ರಾಮಾಂತರದಲ್ಲಿ 1 ಸೆಂ.ಮೀ.ಮಳೆಯಾಗಿದೆ.

ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ರಾಜ್ಯದಾದ್ಯಂತ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.